25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ ವತಿಯಿಂದ ಟ್ರಸ್ಟ್ ಸದಸ್ಯತ್ವ ನೇಮಕಾತಿ ಸಭೆ

ಬೆಳ್ತಂಗಡಿ : ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್ ವತಿಯಿಂದ ಟ್ರಸ್ಟ್ ಸದಸ್ಯತ್ವ ನೇಮಕಾತಿ ಸಭೆಯು ಸೆ.23ರಂದು ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ನಡೆಯಿತು.

ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಡಿ.ವಿ. ಬಾಲಕೃಷ್ಣ ಗೌಡ ಮಾತನಾಡಿ ಸಂಘಟನೆಗಳು ನಿಂತ ನೀರಾಗದೆ, ಹರಿಯುವ ನೀರಾಗಬೇಕು. ನಮ್ಮ ಸಮಾಜದ ಕೊನೆಯ ವ್ಯಕ್ತಿಗೂ ಕೂಡ ಸಹಾಯವಾಗಬೇಕು. ಈ ಟ್ರಸ್ಟ್ ಬೆಳಗಲಿ ಎಂದು ಶುಭಹಾರೈಸಿದರು.

ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಕಲ್ಮ0ಜ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸದಸ್ಯತ್ವದ ಅರ್ಜಿ ನಮೂನೆ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸಂಘದ ಉಪಾಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ತಾಲೂಕು ಸಮಿತಿ ಕಾರ್ಯದರ್ಶಿ ಭರತ್ ಕುಮಾರ್ ಬಂಗಾಡಿ, ಕಾರ್ಯಧ್ಯಕ್ಷರಾದ ಶ್ರೀನಿವಾಸ್ ಗೌಡ ಬೆಳಾಲು, ಜಯಂತ್ ಗೌಡ ಗುರಿಪಳ್ಳ, ಸೂರಜ್ ಕುಮಾರ್ ಒಳಂಬ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಚಾಲಕರಾದ ವಿಜಯ ಗೌಡ ಮತ್ತು ರಂಜನ್‌ ಜಿ.ಗೌಡ, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರುಗಳು ಉಪಸ್ಥಿತರಿದ್ದರು.

ಟ್ರಸ್ಟಿನ ಸದಸ್ಯ ವಿದ್ಯಾಶ್ರೀನಿವಾಸ್ ಗೌಡ ಪ್ರಾರ್ಥಿಸಿದರು. ಸ್ಥಾಪಕ ಟ್ರಸ್ಟಿಗಳಾದ ವಸಂತ ಮರಕಡ ಸ್ವಾಗತಿಸಿದರು. ನವೀನ್ ಬಿ.ಕೆ. ನಿರೂಪಿಸಿದರು. ಸೂರಜ್ ವಳಂಬ್ರ ಧನ್ಯವಾದವಿತ್ತರು.

Related posts

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಪಂಚ ಗ್ಯಾರಂಟಿ ತಾಲೂಕು ಅನುಷ್ಠಾನ ಸಮಿತಿಯ ಮಾಸಿಕ ಸಭೆ

Suddi Udaya

ಗೇರುಕಟ್ಟೆ ಸಮೀಪದ ಬಟ್ಟೆಮಾರು ಎಂಬಲ್ಲಿ ಬೈಹುಲ್ಲು ಟ್ರಕ್ ಗೆ ಬೆಂಕಿ ಅವಘಡ

Suddi Udaya

ವೇಣೂರು: ಭಾರತೀಯ ಜೈನ್ ಮಿಲನ್ ವತಿಯಿಂದ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್‌ರವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ “ಆನ್‌ಪ್ಲೈ” ಲಾಯಿಲದಲ್ಲಿ ಶುಭಾರಂಭ

Suddi Udaya
error: Content is protected !!