25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆದ್ರಬೆಟ್ಟು: ಜಲ್ಸತುಲ್ ಜಮೀಲ್ ಮಿಲಾದ್ 2024 ಪ್ರತಿಭಾ ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕಿನ ಬೆದ್ರಬೆಟ್ಟು ರಿಫಾಯಿಯ್ಯಾ ಜುಮಾ ಮಸೀದಿ ಮತ್ತು ಮುರ್ಷೀದುಲ್ ಆನಾಮ್ ಯಂಗ್ ಮ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಪುಣ್ಯ ಪ್ರವಾದಿಯವರ ಜನ್ಮದಿನ ಅಂಗವಾಗಿ ‌ ಜಲ್ಸತುಲ್ ಜಮೀಲ್2024 ಪ್ರತಿಭಾ ಕಾರ್ಯಕ್ರಮ ಮಿಲಾದ್ ಆಚರಿಸಲಾಯಿತು. ಬೆದ್ರಬೆಟ್ಟು ಖತೀಬರಾದ ನೌಷಾದ್ ಸಖಾಫಿಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಮದ್ರಸ ವಿದ್ಯಾರ್ಥಿಗಳು ಮುಹಮ್ಮದ್ ಪೈಗಂಬ‌ರ್ (ಸ.ಅ )ರವರ ಚರಿತ್ರೆ, ಭಾಷಣ, ಮದಹ್ ಗೀತೆಗಳ ಮೂಲಕ ಈ ದಿನಕ್ಕೆ ಅರ್ಥ ಕಲ್ಪಿಸಿದರು. ಕಾರ್ಯಕ್ರಮದ ಕೊನೆಯ ಭಾಗವಾದ ಸಮಾರೋಪ ಸಮಾರಂಭ ವೇದಿಕೆಯನ್ನು ಬೆದ್ರಬೆಟ್ಟು ಆಡಳಿತ ಸಮಿತಿ ಅಧ್ಯಕ್ಷರಾದ ಸಲೀಂ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.


ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ಜುಮಾ ಮಸೀದಿ ಕಿಲ್ಲೂರು ಖತೀಬ್ ಸಂಶೀರ್ ಸಖಾಫಿ ಪರಪ್ಪು ಉದ್ಘಾಟನೆ ಮಾಡಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯದ್ ಝೈನುಲ್ ಅಬಿದೀನ್ ತಂಙಲ್ ಕಾಜೂರು ಪ್ರಾಸ್ತಾವಿಕ ಭಾಷಣ ಮಾಡಿ ದುಃಹಾ ನೆರವೇರಿಸಿದರು.


ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೇಂದ್ರ ಜುಮಾ ಪದಾಧಿಕಾರಿಗಳು, ಪಿಚಲರ್,ಪೆರ್ದಾಡಿ,ಏರ್ಮಲ,ಧರ್ಮ ಗುರುಗಳು ಹಾಗು ಪದಾಧಿಕಾರಿಗಳು, ಬೆದ್ರಬೆಟ್ಟು ಮಸೀದಿ ಮಾಜಿ ಅಧ್ಯಕ್ಷರು ಹಸೈನಾರ್, ಮುರ್ಷೀದುಲ್ ಆನಾಮ್ ಯಂಗ್ ಮ್ಯಾನ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಉದ್ಯಮಿ ಸತ್ತಾರ್ ಬಂಗಾಡಿ, ವಜೀರ್ ಬಂಗಾಡಿ, ಎಸ್.ಎಸ್.ಎಫ್ ಅಧ್ಯಕ್ಷರಾದ ನೌಫಲ್ ಹಾಶಿಮಿ , ಎಸ್.ವೈ.ಎಸ್ ಅಧ್ಯಕ್ಷರಾದ ಮಜೀದ್ ಗೋಲ್ಡನ್ ಫಿಶ್ ಮತ್ತು ಅಝರ್ ಮಿಸ್ಬಾಹಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಸಿನಾನ್ ಸಅದಿ ಸ್ವಾಗತಿಸಿ ಅಬ್ದುಲ್ ಖಾದರ್ ಸಅದಿ ನಿರೂಪಿಸಿದರು. ಮಧ್ಯಾಹ್ನ ಸಾಮೂಹಿಕ ಮಿಲಾದ್ ವಿಶೇಷ ಪ್ರಾರ್ಥನೆ ಸಾರ್ವಜನಿಕ ತುಪ್ಪದೂಟ ಮತ್ತು ಕಾರ್ಯಕ್ರಮ ಕೊನೆಯಲ್ಲಿ ತಬರ್ರುಕ್ ವಿತರಣೆ ಮಾಡಲಾಯಿತು

Related posts

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚಾರಣೆ

Suddi Udaya

ಕೊಕ್ಕಡದ ರಿತ್ವಿಕಾ ನವೋದಯ ವಿದ್ಯಾಲಯಕ್ಕೆ ಆಯ್ಕೆ

Suddi Udaya

ತಣ್ಣೀರುಪಂತ: ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ವಾಣಿ ಕಾಲೇಜು: ಎನ್‌ಎಸ್‌ಎಸ್ ನಲ್ಲಿ ತೇಜಸ್ ಅವರಿಗೆ ಬೆಸ್ಟ್ ಪರ್ಫಾರ್ಮರ್ ಅವಾರ್ಡ್

Suddi Udaya

ಟ್ರೆಕ್ಕಿಂಗ್ ಗೆ ಬಂದು ದಾರಿ ತಪ್ಪಿದ ಬೆಂಗಳೂರಿನ ಯುವಕ ಕಾಡಿನಲ್ಲಿ ಪತ್ತೆ

Suddi Udaya

ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಜಯ

Suddi Udaya
error: Content is protected !!