24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ನಗರ ಪಂಚಾಯತ್ ಗೆ ಮನವಿ

ಬೆಳ್ತಂಗಡಿ (ಸೆ-24): ಬೆಳ್ತಂಗಡಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್
ಬೆಳ್ತಂಗಡಿ ಸಮಿತಿ ವತಿಯಿಂದ ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ರಾಜೇಶ್.ಕೆ ರವರಿಗೆ ಮನವಿಯನ್ನು ನೀಡಲಾಯಿತು.

ಬೆಳ್ತಂಗಡಿ ನಗರ ವ್ಯಾಪ್ತಿಯ ಸಂಜಯ ನಗರ, ಉದಯನಗರ, ಸುದೆ ಮುಗೇರು, ಸಂತೆಕಟ್ಟೆ, ರೆಂಕೆದಗುತ್ತು, ಮುಗುಳಿ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ವಯೋವೃದ್ಧರು, ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬೀದಿ ನಾಯಿಗಳ ಉಪಟಳ ಹೇಳ ತೀರದು. ಅದರಲ್ಲೂ ಬೈಕ್ ಸವಾರರನ್ನು ಈ ನಾಯಿಗಳು ಅಟ್ಟಿಸಿಕೊಂಡು ಹೋಗಿ ಭಯ ಹುಟ್ಟಿಸುವುದಲ್ಲದೆ ಕಚ್ಚುತ್ತವೆ. ಭಯಗೊಂಡ ಅನೇಕರು ಅಪಘಾತಕ್ಕೂ ಒಳಗಾಗಿದ್ದಾರೆ.

ಪ್ರತಿ ವರ್ಷ ಪಂಚಾಯತ್ ವತಿಯಿಂದಲೇ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಚಿಕಿತ್ಸೆ ಮಾಡದಿರುವುದರಿಂದ ಬೀದಿ ನಾಯಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಮಕ್ಕಳಿಗೂ ಬೀದಿನಾಯಿ ಕಚ್ಚಿವೆ. ಆದ್ದರಿಂದ ಪಂಚಾಯತ್ ಅಧಿಕಾರಿಗಳು ನಾಯಿಗಳ ಹಾವಳಿ ನಿಯಂತ್ರಿಸಿ ಸಾರ್ವಜನಿಕರ ಪ್ರಾಣ ರಕ್ಷಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಸಮಿತಿ ಕೋಶಾಧಿಕಾರಿ ಹಸೀನಾ ಬೆಳ್ತಂಗಡಿ, ಸಫ್ರಾ, ಮುಮ್ತಾಝ್, ರುಬಿಯಾ, ಸಫೀದಾ ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಂಘದಿಂದ ಮನೆ ನಿರ್ಮಾಣಕ್ಕೆ ನೆರವು

Suddi Udaya

ಪುಂಜಾಲಕಟ್ಟೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಘಟಕದ ವಾರ್ಷಿಕೋತ್ಸವ, ಸನ್ಮಾನ

Suddi Udaya

ಅಗತ್ಯ ಬಿದ್ದರೆ ಸಂತ್ರಸ್ಥರ ನೆರವಿಗೆ ವಯನಾಡ್ ಗೆ ತೆರಳಲು ಸಿದ್ಧರಿದ್ದೇವೆ : ಸಮಾಜ ಸೇವಕ ಡಾ. ರವಿ ಕಕ್ಕೆಪದವು

Suddi Udaya

ಬೆಳ್ತಂಗಡಿ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕೊಣಾಜೆ ವಲಯದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ

Suddi Udaya
error: Content is protected !!