24.6 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಫೇಸ್‌ಬುಕ್ ಖಾತೆಯಲ್ಲಿ ಪೊಸ್ಟ್ ಹಾಕಿ ಮಾನಹಾನಿ ಆರೋಪ:ಯುವತಿ ದೂರು: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಫೇಸ್‌ಬುಕ್ ಖಾತೆಯಲ್ಲಿ ತನ್ನ ಹಾಗೂ ಮನೆಯವರ ಮತ್ತು ಮದುವೆ ಆಗುವ ಹುಡುಗನ ಬಗ್ಗೆ ಪೋಸ್ಟ್ ಹಾಕಿ ಮಾನಹಾನಿ ಮಾಡಲಾಗಿದೆ ಎಂದು ತೋಟತ್ತಾಡಿಯ ಯುವತಿಯೋರ್ವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಯುವತಿ ನೀಡಿದ ದೂರಿನಲ್ಲಿ ತಾನು ವ್ಯಾಸಂಗ ಮಾಡುತ್ತಿದ್ದು, ಪ್ರಜ್ವಲ್ ಕೆ.ವಿ ಗೌಡ ಎಂಬವರ ಜೊತೆ ಮದುವೆ ನಿಶ್ಚಯವಾಗಿದೆ. ಶುಭ ರೈ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ನನ್ನ ಹಾಗೂ ಮನೆಯವರ ಮತ್ತು ಮದುವೆ ನಿಶ್ಚಯವಾದ ಹುಡುಗನ ಬಗ್ಗೆ ತನ್ನ ಖಾತೆಯಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿರುವುದಲ್ಲದೆ ಪೋಟೋಗಳನ್ನು ನಕಲಿ ಖಾತೆಯಲ್ಲಿ ಹಾಕುತ್ತಿದ್ದು, ಇದರಿಂದಾಗಿ ನನ್ನ ಹಾಗೂ ಮನೆಯವರ ಮಾನಹಾನಿಯಾಗಿದೆ ಎಂದು ದೂರಿಯಲ್ಲಿ ಯುವತಿ ಆರೋಪಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಧರ್ಮಸ್ಥಳ ಶಾಂತಿವನದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ: ಕರ್ತವ್ಯ ನಿಷ್ಠೆಯೇ ದೇಶ ಸೇವೆ: ಕರ್ನಲ್ ಎಂ.ಜಿ ಜಯರಾಮ್

Suddi Udaya

ಮಂಗಳೂರು: ಸೋಮೇಶ್ವರ ಪುರಸಭೆ ಚುನಾವಣೆ: ಬೆಳ್ತಂಗಡಿ ಮೂಲದ ಬಳಂಜ ಜಯ ಪೂಜಾರಿ ನಿಟ್ಟಡ್ಕ ರವರಿಗೆ ಭರ್ಜರಿ ಗೆಲುವು

Suddi Udaya

ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆ

Suddi Udaya

ಇಂದಬೆಟ್ಟು: ಕಲ್ಲಾಜೆ ಶಾಲೆಯ ಶಿಕ್ಷಕಿ ಅಪ್ಪಿ ಪೂಜಾರ್ತಿ ಯಾನೆ ಆಶಾಲತಾ ನಿಧನ

Suddi Udaya

ಇಳಂತಿಲ ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಯವರ ಪರವಾಗಿ ಮನೆ ಮನೆ ಭೇಟಿ ಅಭಿಯಾನ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿಯ ನಗರ ಮತ್ತು ಗ್ರಾಮೀಣ ಅಧ್ಯಕ್ಷರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ

Suddi Udaya
error: Content is protected !!