24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಸಮಾಜಸೇವಕ ಚಾಂಡಿ ರವರಿಗೆ ವಿನ್ಸೆಂಟ್ ಡಿ’ಪೌಲ್ ದಿನದಲ್ಲಿ ಸನ್ಮಾನ

ನೆರಿಯ: ಗಂಡಿಬಾಗಿಲು ಸಂತ ಥೋಮಸ್ ದೇವಾಲಯದಲ್ಲಿ, ಹಿರಿಯ ಸಮಾಜಸೇವಕರಾದ ಮತ್ತು ವಿವಿಧ ಸಂಘ-ಸಂಸ್ಥೆಗಳ ಸದಸ್ಯರಾಗಿರುವ ಚಾಂಡಿ ಅವರನ್ನು, ವೇದಿಕೆಯ ಹಿಂದೆ ಹಲವಾರು ಜನಾನುರಾಗಿ ಕಾರ್ಯಕ್ರಮಗಳ ಮೂಲಕ, ನೆರಿಯ-ಗಂಡಿಬಾಗಿಲು ಪ್ರದೇಶದಲ್ಲಿ ಮನೆ ಮಾತಾಗಿರುವ ಕಾರಣಕ್ಕಾಗಿ, ವಿನ್ಸೆಂಟ್ ಡಿ ಪೌಲ್ ದಿನದಂದು ಸನ್ಮಾನಿಸಲಾಯಿತು.

ಸಮಾಜ ಸೇವೆ ಮತ್ತು ಬಡವರ ಏಳಿಗೆಗಾಗಿ ಅವರು ನೀಡಿದ ಅನೇಕ ಸೇವೆಗಳನ್ನು, ಸ್ಥಳೀಯ ವಿನ್ಸೆಂಟ್ ಸೊಸೈಟಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ದಕ್ಷಿಣ ಕನ್ನಡ ಗ್ರಾಮೀಣಾಭಿವೃದ್ಧಿ ಸೊಸೈಟಿ (DKRDS), ಮತ್ತು ದೀರ್ಘಾವಧಿ ಕ್ರೆಡಿಟ್ ಯೂನಿಯನ್, ಗಂಡಿಬಾಗಿಲು ಇದರ ಅಧ್ಯಕ್ಷರಾಗಿ, ಚರ್ಚ್ ಪಾಲನಾ ಸಮಿತಿ ಸದಸ್ಯರಾಗಿ, ಟ್ರಸ್ಟಿಯಾಗಿಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಕೊಡುಗೆಗಳನ್ನು ಗೌರವಿಸಲಾಯಿತು.

ಚರ್ಚ್ ನ ಧರ್ಮ ಗುರು ವಂ. ಫಾ ಜೋಸ್, ಟ್ರಸ್ಟಿಗಳಾದ ಶಾಜಿ ಮಣ್ಣಿಯೇಕುಂನೆಲ್, ಶಿಜೋ ಕುರಿಯನ್ ಸೇಬಾಸ್ತಿಯನ್ ಎಂ ಜೆ ಮೊದಲಾದವರು ಉಪಸ್ಥಿತರಿದ್ದರು. ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯ ಶಿಜು ಸಿ ವಿ ಕಾರ್ಯಕ್ರಮ ನಿರೂಪಿಸಿದರು.

Related posts

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರ

Suddi Udaya

ಜೆ ಸಿ ಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಎಸ್. ಎಸ್.ಎಲ್.ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮೇಘನಾ ರವರಿಗೆ ಸನ್ಮಾನ

Suddi Udaya

ಅಳದಂಗಡಿ: ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ಉದ್ಘಾಟನೆ

Suddi Udaya

ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಉಪಾಧ್ಯಕ್ಷರಾಗಿ ಲೋಕೇಶ್ ಗೌಡ

Suddi Udaya

ಎ.25: ಮರೋಡಿ ದೇವಸ್ಥಾನದಲ್ಲಿ ಚಂಡಿಕಾಯಾಗ, ಮೃತ್ಯುಂಜಯ ಹೋಮ

Suddi Udaya

ಬೆಳ್ತಂಗಡಿ ಅಪರ ಸರ್ಕಾರಿ ವಕೀಲರಾಗಿ ಮನೋಹರ ಕುಮಾರ್ ನೇಮಕ

Suddi Udaya
error: Content is protected !!