ಇಂದಬೆಟ್ಟು: ಕುಡಿಯುವ ನೀರಿಗಾಗಿ ಗ್ರಾ.ಪಂ. ಮಾಜಿ ಸದಸ್ಯ ವೆಂಕಪ್ಪ ಕೋಟ್ಯಾನ್ ರಿಂದ ಪಂಚಾಯತ್ ಎದುರು ಪ್ರತಿಭಟನೆ: ಶೀಘ್ರವಾಗಿ ದುರಸ್ತಿ ಮಾಡಿಸಿಕೊಡುವುದಾಗಿ ಗ್ರಾ.ಪಂ. ಅಧ್ಯಕ್ಷೆ ಭರವಸೆ

Suddi Udaya

/05/nisarga-curtain-online-advt-copy.jpg"/>

ಇಂದಬೆಟ್ಟು: ಇಲ್ಲಿಯ ಅರ್ಧನಾರೀಶ್ವರ ದೇವಸ್ಥಾನದ ದ್ವಾರದಿಂದ ದೇವಸ್ಥಾನದವರೆಗೆ ಹಾಕಿದ ಪೈಪ್ ಲೈನ್ ಗಳು ಒಡೆದು ಹೋಗಿ ಹಲವು ದಿನಗಳಿಂದ ಆ ಪರಿಸರದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಪಂಚಾಯತ್ ನವರು ಈವರೆಗೆ ಪೈಪ್ ದುರಸ್ತಿಗೊಳಿಸದೆ ಇದ್ದುದರಿಂದ ಪಂಚಾಯತ್ ನ ಮಾಜಿ ಸದಸ್ಯ ವೆಂಕಪ್ಪ ಕೋಟ್ಯಾನ್ ರವರು ಅ.2 ರಂದು ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷೆ ಆಶಾಲತ ರವರು ದೇವಸ್ಥಾನ ಬಳಿ ಕೆಲಸಗಳು ನಡೆಯುತ್ತಿರುವ ಸಂದರ್ಭ ವಾಹನಗಳು ಸಂಚರಿಸುವಾಗ ಪೈಪ್ ಗಳು ಒಡೆದುಹೋಗಿರುತ್ತದೆ. ಇವುಗಳನ್ನು ಹಲವಾರು ಭಾರಿ ದುರಸ್ತಿ ಮಾಡಲಾಗಿತ್ತು, ಈಗ ದೇವಸ್ಥಾನದ ಬಳಿಯ ಕೆಲಸ ಮುಗಿದಿದ್ದು ನಾಳೆ (ಅ.3 ) ಒಡೆದು ಹೋದ ಪೈಪ್ ಗಳನ್ನು ದುರಸ್ತಿಗೊಳಿಸುವುದಾಗಿ ಈಗಾಗಲೇ ವೆಂಕಪ್ಪ ಕೋಟ್ಯಾನ್ ರವರಿಗೆ ತಿಳಿಸಲಾಗಿತ್ತು ಎಂದರು.

Leave a Comment

error: Content is protected !!