27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

ಮುಂಡಾಜೆ : “ಉತ್ತಮ ಓದುಗನಾದರೆ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುವುದರ ಜೊತೆಗೆ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಪತ್ರಿಕಾ ಕ್ಷೇತ್ರದಲ್ಲಿ ಮೈಮರೆಯದೆ ಜಾಗೃತರಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು” ಎಂದು ಪ್ರಜಾವಾಣಿಯ ಉಪಸಂಪಾದಕ ರೇವಣ್ಣ ಎಂ ಅಭಿಪ್ರಾಯಪಟ್ಟರು.

ಅವರು ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಮಾಧ್ಯಮ ಕ್ಷೇತ್ರದ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಂಜೀವ ಗೌಡ ಮಾಕಳರು, ವಹಿಸಿದ್ದರು. ಅತಿಥಿಗಳಾಗಿ ಜತ್ತನ್ನ ಗೌಡ, ನಿವೃತ ಬಿ.ಎಸ್.ಎನ್.ಎಲ್, ಉದ್ಯೋಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಬಿರ ನಿರ್ವಹಣಾ ಸಮಿತಿಯ ಅಧ್ಯಕ್ಷ ಸೋಮನಾಥ ಗೌಡ ಮಾಕಳ ಉಪಸ್ಥಿತರಿದ್ದರು. ಶಿಬಿರಾರ್ಥಿ ಲತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರಾಧಿಕಾರಿ ಶ್ರೀಮತಿ ನಮಿತಾ ಕೆ.ಆರ್ ಸ್ವಾಗತಿಸಿ, ಅಕ್ಷಯ ಧನ್ಯಾವಾದಗೈದರು.

Related posts

ವೇಣೂರು: ಉಂಬೆಟ್ಟು ಸ.ಉ.ಪ್ರಾ. ಶಾಲೆಯ ಕಟ್ಟಡ ಮೇಲ್ಛಾವಣಿ ದುರಸ್ತಿಗೆ ಧರ್ಮಸ್ಥಳ ಯೋಜನೆಯಿಂದ ರೂ ಒಂದು ಲಕ್ಷ ಅನುದಾನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಾತ್ರಿ ನಿವಾಸ ಹಾಗೂ ಅನ್ನ ಛತ್ರದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಬೆಳ್ತಂಗಡಿ ಲೋಬೊ ಟಿವಿಎಸ್ ಮೋಟಾರ್ಸ್ ಮಳಿಗೆಯಲ್ಲಿ ಆಯುಧ ಪೂಜೆ

Suddi Udaya

ಮಿತ್ತಬಾಗಿಲು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಿಶೇಷ ತರಗತಿ ಕಾರ್ಯಕ್ರಮದ ಉದ್ಘಾಟನೆ

Suddi Udaya

ನಡ : ಮಂಜೊಟ್ಟಿ ಬಿ.ಕೆ ಹರಿಪ್ರಸಾದ್ ಅನುದಾನದಲ್ಲಿ ನಿರ್ಮಾಣವಾದ ಆಟೋ ನಿಲ್ದಾಣ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

Suddi Udaya
error: Content is protected !!