ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭವು ಅ.10 ರಂದು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ದೇಶದ ಹೆಮ್ಮೆಯ ಪುತ್ರ ಹೆಸರಾಂತ ಉದ್ದಿಮೆ ರತನ್ ಟಾಟರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದರ ಮುಖಾಂತರ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಮಾರಂಭದಲ್ಲಿ ಅತಿಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಮುಖ್ಯ ಅತಿಥಿಯಾಗಿ ಡಾ. ಲೋಕೇಶ್ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು. ಇದು ಸಂಘದ ಹೊಸ ವರ್ಷದ ಚಟುವಟಿಕೆಗಳಿಗೆ ಶುಭಾರಂಭವನ್ನು ಸೂಚಿಸಿತು. ಮುಖ್ಯ ಅತಿಥಿಗಳು ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ವಾಣಿಜ್ಯದ ಮಹತ್ವವನ್ನು ಸಂಘದ ವಿದ್ಯಾರ್ಥಿಗಳಿಗೆ ತಿಳಿಸಿದರು. ವಾಣಿಜ್ಯ ಸಂಘದ ಉದ್ದೇಶಗಳು ಮತ್ತು ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವನ್ನು ಒದಗಿಸುವ ಅವಶ್ಯಕತೆಯ ಬಗ್ಗೆ ವಿವರಿಸಿದರು. ವಾಣಿಜ್ಯ ಸಂಘದ ಅಧ್ಯಾಪಕ ಸಂಚಾಲಕರಾದ ಪ್ರೊಫೆಸರ್ ನವೀನ್ ಇವರು ಕಾರ್ಯಕ್ರಮದ ಉದ್ದೇಶಗಳನ್ನು ಕುರಿತು ಮಾತನಾಡಿದರು.
ಪ್ರೊಫೆಸರ್ ರವಿ ಎಂ.ಎನ್. ಸ್ನಾತಕೋತ್ತರ ವಿಭಾಗದ ಸಂಚಾಲಕರು ವಾಣಿಜ್ಯ ಸಂಘದ ಪದಾಧಿಕಾರಿಗಳಿಗೆ ಬ್ಯಾಡ್ಜ್ ವಿತರಿಸಿ ಶುಭ ಕೋರಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಪಧ್ಮನಾಭ ಕೆ ಇವರು ವಾಣಿಜ್ಯ ಸಂಘದ ಮುಂಬರುವ ಎಲ್ಲಾ ಕಾರ್ಯಕ್ರಮಗಳಿಗೆ ಶುಭ ಸೂಚಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಘವ ಎನ್ ಇವರು ಅಧ್ಯಕ್ಷ ಭಾಷಣದಲ್ಲಿ ವಾಣಿಜ್ಯ ಸಂಘದ ಜವಾಬ್ದಾರಿಗಳನ್ನು ನೆನಪಿಸಿದರು. ಜೊತೆಗೆ ಸ್ನಾತಕೋತ್ತರ ವಿಭಾಗದ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ಅಧ್ಯಾಪಕ ಎಂಬ ಪ್ರಮಾಣಪತ್ರ ನೀಡಲಾಯಿತು. ಡಾ. ಕುಶಾಲಪ್ಪ ಐಕ್ಯೂಎಸಿ ಸಂಚಾಲಕರು ಹಾಗೂ ವಾಣಿಜ್ಯ ಸಂಘದ ವಿಧ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಣಿಜ್ಯ ಸಂಘದಿಂದ ವಿದ್ಯಾರ್ಥಿಗಳಿಗೆ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಯಿತು.
ಕುಮಾರಿ ಅನನ್ಯ ಸ್ವಾಗತಿಸಿದರು, ಸಂಘದ ಅಧ್ಯಕ್ಷಿ ಕುಮಾರಿ ಸಿಂಧು ವಂದಿಸಿದರು, ಕುಮಾರಿ ಪ್ರಜ್ಞಾ ಮತ್ತು ಕುಮಾರಿ ಸಾಯಿನ ಕಾರ್ಯಕ್ರಮ ನಿರ್ವಹಿಸಿದರು.