September 6, 2026
Uncategorized

ಕಲ್ಲೇರಿ ವಿನಾಯಕ ನಗರದಲ್ಲಿ ಐಸಿರಿ ಮಹಿಳಾ ಮಂಡಳಿಯ ಉದ್ಘಾಟನೆ

ಕಲ್ಲೇರಿ :ಕರಾಯ ಗ್ರಾಮದ ಕಲ್ಲೇರಿಯ ವಿನಾಯಕ ನಗರದಲ್ಲಿ ‘ಐಸಿರಿ’ ಮಹಿಳಾ ಮಂಡಳಿಯ ಉದ್ಘಾಟನೆ ಅ 20ರಂದು ನಡೆಯಿತು…

ತಣ್ಣೀರುಪಂಥ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೇಮಾವತಿ, ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು..
ಸಂಪನ್ಮೂಲ ವ್ಯಕ್ತಿಯಾಗಿ ಉಷಾ ನಾಯಕ್ ಇವರು ಮಂಡಳಿಯ ರೂಪು ರೇಷೆ, ಸದಸ್ಯರ ಜವಾಬ್ದಾರಿ, ಮಂಡಳಿಯ ಆರ್ಥಿಕ ಸಭಲೀಕರಣದ ಕುರಿತು ಮಾತನಾಡಿ ಶುಭ ಹಾರೈಸಿದರು..

ವೇದಿಕೆಯಲ್ಲಿ ಮಂಡಳಿಯ ಗೌರವ ಅಧ್ಯಕ್ಷರಾದ ಶ್ರೀಮತಿ. ನೀಲಮ್ಮ ಧರ್ಣಪ್ಪ ಗೌಡ ನೇತ್ರವತಿ, ಮಂಡಳಿಯ ಅಧ್ಯಕರಾದ ಶ್ರೀಮತಿ. ದೀಕ್ಷಿತಾ ರವಿ, ಗೌರವ ಉಪಸ್ಥಿತರಾಗಿ ಶ್ರೀ. ಸಾಮ್ರಾಟ್ ಕರ್ಕೇರ, ಸದಸ್ಯರು ಗ್ರಾಮ ಪಂಚಾಯತ್ ತಣ್ಣೀರುಪಂಥ ಹಾಗೂ ಅಧ್ಯಕ್ಷರು ಗಣೇಶೋತ್ಸವ ಸಮಿತಿ, ಶ್ರೀ ಉಮೇಶ್ ಸಾಲ್ಯಾನ್, ಕಾರ್ಯದರ್ಶಿ ಗಣೇಶೋತ್ಸವ ಸಮಿತಿ, ಪ್ರಭಾಕರ ಪೊಸಂದೋಡಿ ಸಂಚಾಲಕರು ಗಣೇಶೋತ್ಸವ ಸಮಿತಿ ಉಪಸ್ಥಿತರಿದ್ದರು..

ಶ್ರೀಮತಿ. ಪ್ರೇಮ ದೇವರಮಾರು ಪ್ರಾರ್ಥಿಸಿ, ಶ್ರೀಮತಿ. ಪ್ರಿಯ ಲಕ್ಷ್ಮಣ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ. ನಳಿನಿ ರೈ ಧನ್ಯವಾದನಿತ್ತು, ಮಂಡಳಿಯ ಕಾರ್ಯದರ್ಶಿ ಶ್ರೀಮತಿ. ಚಂಚಲಾಕ್ಷಿ ಹರೀಶ್ ಖಂಡಿಗ ಕಾರ್ಯಕ್ರಮ ನಿರೂಪಿಸಿದರು

Related posts

ಮಿತ್ತಬಾಗಿಲು :ರಮೇಶ್ ಗೌಡ ರವರ ಮನೆಗೆ ಶಾಸಕ ಹರೀಶ್ ಪೂಂಜ

Suddi Udaya

ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನಲ್ಲಿ ಡಿ. 7 ಶನಿವಾರ ದಂದು ನಡೆಯುವ ದೊಂಪದಬಲಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜು.8 : ಬೆಳ್ತಂಗಡಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಅಭಿನಂದನೆ

Suddi Udaya

ನೇತ್ರಾವತಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ತೆರವು ಕಾರ್ಯ

Suddi Udaya

ರುಡ್ಸೆಟ್ ಸಂಸ್ಥೆ ಉಜಿರೆಯ2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ವರದಿ ಬಿಡುಗಡೆಗೊಳಿಸಿದ ಡಾ.ಹೆಗ್ಗಡೆ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಅಂತರಾಧ್ಯಯನ ವೃತ್ತಮ್ ವತಿಯಿಂದ ಗುರುಪೂರ್ಣಿಮಾ ಕಾರ್ಯಕ್ರಮ

Suddi Udaya
error: Content is protected !!