30 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ಎನ್ ಎಸ್ ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ

ನಾರಾವಿ: “ಪರಿಸರವನ್ನ ಸ್ವಚ್ಛಗೊಳಿಸುವುದು ಮಾತ್ರ ಎನ್ ಎಸ್ ಎಸ್ ನ ಕೆಲಸವಲ್ಲ. ಮನುಷ್ಯನ ಮಾನಸಿಕ ಕೊಳೆಯನ್ನು ತೊಡೆದು ಅರಿವನ್ನು ಮೂಡಿಸಿ ಮನೋಬಲವನ್ನು ನೀಡುವುದೇ ಎನ್ ಎಸ್ ಎಸ್. ವಿದ್ಯಾರ್ಥಿಗಳಲ್ಲಿ ತನ್ನತನವನ್ನು ಬೆಳೆಸಿ ಪ್ರೇರೇಪಿಸಿ ಸುಂದರ ವ್ಯಕ್ತಿತ್ವವನ್ನು ನೀಡುವ ಕಲೆಗಾರಿಕೆ ಇರುವ ಏಕೈಕ ಸಂಸ್ಥೆ ಯನ್ ಯಸ್ ಯಸ್ ” ಎಂದು ಶ್ರೀ ಧವಳ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ಸಂತೋಷ್ ಶೆಟ್ಟಿ ಅಭಿಪ್ರಾಯಪಟ್ಟರು . ಅವರು ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ.ಆಲ್ವಿನ್ ಸೆರಾವೋ ಅವರು “ಎನ್ಎಸ್ಎಸ್ ನಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಭೇದಭಾವ ಇರೋದಿಲ್ಲ. ನೈತಿಕತೆ ಹಾಗೂ ಆರೋಗ್ಯ ಪೂರ್ಣ ಬದುಕು ಅವರಿಗೆ ಒಲಿಯುತ್ತದೆ” ಎಂದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ದಿನೇಶ್ ಬಿ.ಕೆ ಬಳಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ರಶ್ವಿತಾ ಧನ್ಯವಾದವಿತ್ತರು. ಸ್ವಯಂಸೇವಕಿ ಕು.ಅನ್ವಿತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ಉಪನ್ಯಾಸಕರಾದ ಅವಿಲ್ ಮೋರಸ್, ಸಂತೋಷ್ ಈದು, ಅವಿನಾಶ್ ಲೋಬೋ, ಶ್ರೀಮತಿ ಅನಿತಾ ಡಿಸೋಜಾ ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಕಿಡ್ನಿ ಮತ್ತು ಬ್ರೈನ್ ಸ್ಟ್ರೋಕ್ ಸಮಸ್ಯೆಯಿಂದ ಬಳಲುತ್ತಿರುವ ಕುವೆಟ್ಟು ಹೊನ್ನಪ್ಪ ಪೂಜಾರಿಯವರ ಚಿಕಿತ್ಸೆಗೆ ನೆರವಾಗಿ

Suddi Udaya

ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ವೆಂಕಪ್ಪ ಕೋಟ್ಯಾನ್ ರಿಂದ ದೂರು

Suddi Udaya

ಒಕಿನಾವನ್ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ : ಬೆಳ್ತಂಗಡಿಯ ಅವಳಿ ಮಕ್ಕಳು ವಿಜೇತರು

Suddi Udaya

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಯಕ್ಷಸಂಭ್ರಮ ಉದ್ಘಾಟನೆ: ನಾಲ್ವರು ಯಕ್ಷಗಾನ ತರಬೇತಿ ಗುರುಗಳಿಗೆ ಗೌರವಾರ್ಪಣೆ: 8 ಶಾಲೆಗಳು 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ

Suddi Udaya

ನ್ಯಾಯತರ್ಪು : ರಕ್ತೇಶ್ವರಿ ಪದವು ಬಳಿ ಗುಡ್ಡ ಕುಸಿತ: ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷರು , ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಮೂರ್ತೆದಾರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು

Suddi Udaya
error: Content is protected !!