ತಣ್ಣೀರುಪಂತ ಗ್ರಾಮ ಪಂಚಾಯತಿಯ ಸಭಾಭವನದಲ್ಲಿ ತಾಲೂಕು ಪಂಚಾಯತ್ ಬೆಳ್ತಂಗಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗೆ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ ನಡೆಯಿತು.
ಈ ಕಾರ್ಯಕ್ರಮಕ್ಕೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಭವಾನಿ ಶಂಕರ್ ರವರು ಭೇಟಿ ನೀಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ನರೇಗಾ ಯೋಜನೆ ಸಹಕಾರಿಯಾಗಲಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ತಣ್ಣೀರುಪಂತ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರವಣ್ ಕುಮಾರ್, ಗ್ರಾ. ಪಂ ಕಣಿಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ, ಕಳಿಯ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ತೆಕ್ಕಾರು ಮತ್ತು ಇಳಂತಿಲ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಮಯ್ಯ,ತಣ್ಣೀರುಪಂತ ಗ್ರಾ. ಪಂ ಕಾರ್ಯದರ್ಶಿ ಆನಂದ, ಮಚ್ಚಿನ ಗ್ರಾ. ಪ ಕಾರ್ಯದರ್ಶಿ ಸಂಜೀವ, ಬಾರ್ಯ ಗ್ರಾ. ಪಂ ಕಾರ್ಯದರ್ಶಿ ಶ್ರೀಮತಿ ಶೀಲಾ, ಇಳಂತಿಲ ಗ್ರಾ. ಪಂ ಕಾರ್ಯದರ್ಶಿ ಶ್ರೀಮತಿ ವಿಜಯ,ತಾಂತ್ರಿಕ ಸಹಾಯಕ ಅಭಿಯಂತರರಾದ ಶರಣ್ ರೖ, ತಾಲೂಕು ಐಇಸಿ ಸಂಯೋಜಕರು ಶ್ರೀಮತಿ ವಿನಿಷ, ಬಿ. ಎಫ್. ಟಿಗಳಾದ , ಪ್ರವೀಣ್, ಕಳಿಯ, ಕಣಿಯೂರು, ತಣ್ಣೀರುಪಂತ, ಮಚ್ಚಿನ, ಬಾರ್ಯ, ತೆಕ್ಕಾರು, ಇಳಂತಿಲ ಗ್ರಾಮ ಪಂಚಾಯತಿಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು,ಎಮ್.ಬಿ. ಕೆ, ಎಲ್. ಸಿ. ಆರ್. ಪಿ, ಕೃಷಿ ಸಖಿ, ಪಶು ಸಖಿ, ಉಜಿರೆ ಎಸ್. ಡಿ. ಎಮ್ ಸ್ನಾತಕೋತ್ತರ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು, ಗ್ರಾ. ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಯಾನಂದ ವಲಯ ಮೇಲ್ವಿಚಾರಕರು ಎನ್. ಆರ್. ಎಲ್. ಎಮ್ ತಾಲೂಕು ನಿರ್ವಹಣಾ ಘಟಕ ಇವರು ಸ್ವಾಗತಿಸಿ, ಕೆ.ಸ್ವಸ್ತಿಕ್ ಜೖನ್ ವಲಯ ಮೇಲ್ವಿಚಾರಕರು ಎನ್. ಆರ್. ಎಲ್. ಎಮ್ ತಾಲೂಕು ನಿರ್ವಹಣಾ ಘಟಕ ಇವರು ನಿರೂಪಿಸಿದರು.