ಅರಸಿನಮಕ್ಕಿ :ಅ. 24ರಂದು ಸಂಜೆ ಸುರಿದ ಭಾರಿ ಮಳೆಗೆ ಅರಸಿನಮಕ್ಕಿಯ ಕಾನ ಎಂಬಲ್ಲಿ ಹತ್ತಿರದ ಗುಡ್ಡದಿಂದ ಬಂದ ನೀರು ತೋಡಿಗೆ ಬಂದು ಅಲ್ಲಿಂದ ರಸ್ತೆಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದ ಪರಿಣಾಮ ಜಾನಕಿ ಎಂಬವರ ಮನೆಗೆ ಹಾನಿ ಉಂಟುಮಾಡಿದ್ದು ಮನೆಯ ವಸ್ತುಗಳು ನೀರಿನಲ್ಲಿ ತೇಲಿ ಹೋದ ಘಟನೆ ನಡೆದಿದೆ.
ಏಕಾಏಕಿ ಬಂದ ನೀರಿನಿಂದಾಗಿ ಮನೆಯಲ್ಲಿದ್ದ ತಾಯಿ, ಮಗಳು ಹಾಗೂ ಮಕ್ಕಳನ್ನು ರಿಕ್ಷಾ ಚಾಲಕರು ನೋಡಿ ಅವರನ್ನು ಪಕ್ಕದ ರಬ್ಬರ್ ಗುಡ್ಡೆಗೆ ಸ್ಥಳಾಂತರಿಸಿದರಿಂದ ಯಾವುದೇ ಪ್ರಾಣಪಾಯವಾಗಲಿಲ್ಲ. ಮನೆಯಲ್ಲಿದ್ದ ಕಡೆಯುವ ಕಲ್ಲು ಹಾಗೂ ಸ್ಕೂಟಿ ಕೂಡ ನೀರಿನಲ್ಲಿ ತೇಲಿ ಹೋಗಿದೆ.
ಇಂದು (ಅ.25 ) ಅರಸಿನಮಕ್ಕಿಯ ರಿಕ್ಷಾ ಚಾಲಕರು ಸೇರಿ ಹಾನಿಯಾದ ಮನೆಯ ದುರಸ್ತಿ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಅರಸಿನಮಕ್ಕಿ ಪಿಡಿಒ ಜಯರಾಜ್, ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಗಣೇಶ್ ಹೊಸ್ತೋಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.