ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯಲ್ಲಿ 8ನೇ ,9 ನೇ ಮತ್ತು 10ನೇ ತರಗತಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು.
ಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯ ವಂ.ಭಗಿನಿ ಡಿಂಪಲ್ ಡಿಸೋಜರವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳು ಸೂಕ್ತ ಸಮಯದಲ್ಲಿ ಜೀವನದ ಗುರಿಯನ್ನು ಆಯ್ಕೆ ಮಾಡಬೇಕು. ವೃತ್ತಿ ಎಂದರೇನು ಅದನ್ನು ಆಯ್ಕೆ ಮಾಡುವ ರೀತಿಯನ್ನು ಪ್ರಾಜೆಕ್ಟರ್ ಮೂಲಕ ಮಾಹಿತಿ ನೀಡಿದರು. ನಮ್ಮ ಆಸಕ್ತಿ ವ್ಯಕ್ತಿತ್ವ ಆಧಾರಿತವಾಗಿ ವೃತ್ತಿ ಆಯ್ಕೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಕೇವಲ ಅಂಕಗಳು ಮಾತ್ರವಲ್ಲ ನಮ್ಮ ವಿವಿಧ ಕೌಶಲ್ಯಗಳ ಆಧಾರಿತವಾಗಿ ಆಯ್ಕೆಗೆ ಪ್ರಾಶಸ್ತ್ಯ ನೀಡುತ್ತಾರೆ. 10ನೇ ತರಗತಿಯ ನಂತರ ಏನು? ಯಾವ ಯಾವ ವಿಷಯಗಳನ್ನು ನಾವು ಅಧ್ಯಯನ ಮಾಡಬೇಕು? ಈ ಆಯ್ಕೆ ನಮ್ಮ ಗುರಿಯ ಆಧಾರಿತವಾಗಿ ತಾರ್ಕಿಕ ಚಿಂತನೆಯಿಂದ ಆಯ್ಕೆ ಮಾಡಬೇಕು. ಪರೀಕ್ಷೆಗಳಿಗೆ ಹೇಗೆ ತಯಾರಿ ಮಾಡಬೇಕು? ಎಂಬ ಮಾಹಿತಿ ನೀಡಿದರು. ಯಾವ ವೃತ್ತಿಯೂ ಕೀಳಲ್ಲ, ಅದನ್ನು ನಾನು ಹೇಗೆ ಮಾಡುತ್ತೇನೆ ಅದರ ಮೇಲೆ ಯಶಸ್ಸು ಆಧಾರಿತವಾಗಿದೆ. ಸರಕಾರಿ ಹುದ್ದೆಗಳ ಉದ್ಯೋಗ ಗಿಟ್ಟಿಸುವುದು ಹೇಗೆ ಎಂಬ ಮಾಹಿತಿ ನೀಡಿದರು.
9ನೇ ತರಗತಿಯ ಶಾಝ್ಮ ಕಾರ್ಯಕ್ರಮ ನಿರ್ವಹಿಸಿ, ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ, ಪ್ರಕಾಶ್ ವಂದನಾರ್ಪಣೆಗೈದರು. ಶಾಲಾ ಮುಖ್ಯೋಪಾಧ್ಯಾಯಿನಿ ವಂ.ಭಗಿನಿ ಲೀನಾ ಡಿಸೋಜರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಅಲಂಕರಿಸಿದರು.