25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಗೀನಿಯರ ಸುವರ್ಣ ಸಂಭ್ರಮ: ಧರ್ಮಾಧ್ಯಕ್ಷರಿಂದ ಗೌರವ ಮತ್ತು ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪವಿತ್ರ ಹೃದಯ ಭಗೀನಿಯರ ಮೇರಿ ಮಾತಾ ರಿಜಿಯನ್‌ನ ನಾಲ್ವರು ಭಗೀನಿಯರ ವೃತ ಸ್ವೀಕಾರದ ಸುವರ್ಣ ಸಂಭ್ರಮ ಮತ್ತು ರಜತ ಸಂಭ್ರಮವನ್ನು ನೆಲ್ಯಾಡಿಯಲ್ಲಿ ಆಚರಿಸಲಾಯಿತು. “ಆದ್ಯಾತ್ಮ ಮತ್ತು ಸೇವೆಯ ಮೂಲಕ ಭಗೀನಿಯರು ಪ್ರಭು ಯೇಸುಕ್ರಿಸ್ತನ ಜೀವನ ಮತ್ತು ಅವರ ಬದುಕಿನ ನೇರ ಪ್ರಾತ್ಯಕ್ಷತೆ ತಮ್ಮ ಬದುಕಿನಲ್ಲಿ ಒದಗಿಸುತ್ತಿದ್ದಾರೆ,” ಎಂದು ಇವರನ್ನು ಅಭಿನಂದಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಹೇಳಿದರು.

ಸಮಾರಂಭದಲ್ಲಿ ಸಿಸ್ಟರ್ ಫಿಲೋಮಿನ ಕುರಿಯನ್ ಮತ್ತು ಸಿಸ್ಟರ್ ಆನಿ ಕುರಿಯನ್ ಸುವರ್ಣ ಸಂಭ್ರಮವನ್ನು ಹಾಗೂ ಸಿಸ್ಟರ್ ಮೇಬಿಲ್ ಜೋನ್ ಮತ್ತು ಸಿಸ್ಟರ್ ಜಿನ್ಸಿ ರೋಸ್ ರಜತ ಮಹೋತ್ಸವವನ್ನು ಆಚರಿಸಿದರು. ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಹಾಗೂ ರಿಜಿನಲ್ ಸುಪೀರಿಯರ್ ಲಿಸ್ ಮಾತ್ಯು ಶುಭ ಕೋರಿದರು. ಹೆಗ್ಗಳದ ವಂದನೀಯ ಫಾ. ರೋಷನ್ ಪುದುಶೇರಿ ಮತ್ತು ಬಜಗೋಳಿಯ ಫಾ. ತೋಮಸ್ ಪಾರೆಕಾಟ್ಟಿಲ್ ಬಲಿಪೂಜೆಯಲ್ಲಿ ಭಾಗವಹಿಸಿದರು. ವಂದನೀಯ ಸಿಸ್ಟರ್ ಎಲ್ಸಿಲಿಟ್, ಸಿಸ್ಟರ್ ಬ್ಲೆಸಿಮರಿಯ, ಸಿಸ್ಟರ್ ಆಲ್ಫಿ, ಸಿಸ್ಟರ್ ತೆರೆಸ್ ಕುರಿಯನ್, ಸಿಸ್ಟರ್ ಆಲಿಸ್, ಸಿಸ್ಟರ್ ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Related posts

ಲಾಯಿಲ :ಕರ್ನೋಡಿ ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿ ಆಂಗ್ಲ ಮಾಧ್ಯಮ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ ಅಕ್ರಮವಾಗಿ ಗೋ ಸಾಗಾಟ

Suddi Udaya

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ವಾಸು ಗೌಡ ಬಂದಾರು ನಿಧನ

Suddi Udaya

ಮದ್ದಡ್ಕ: ಪಲ್ಕೆ ನಿವಾಸಿ ಸುನಿಲ್ ಕೊರೆಯ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಆಯ್ಕೆ

Suddi Udaya

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಭಾರತೀಯ ಯುವ ರೆಡ್ ಕ್ರಾಸ್ ಮತ್ತು ರೋವರ್ಸ್ ರೇಂಜರ್ಸ್ ಸಹಯೋಗದಿಂದ “70ನೇ ಅಖಿಲ ಭಾರತ ಸಹಕಾರ ಸಪ್ತಾಹ 2023” ಕಾರ್ಯಕ್ರಮ

Suddi Udaya
error: Content is protected !!