September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಶಾಖೆಯ ಹತ್ತನೇ ವರ್ಷದ ಆಚರಣೆ

ಉಜಿರೆ : ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಉಜಿರೆ ಶಾಖೆಯ ದಶಮಾನೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಉಜಿರೆಯಲ್ಲಿ ನಡೆಯಿತು. ಇದರ ಅಂಗವಾಗಿ ಸತ್ಯನಾರಾಯಣ ಪೂಜೆ,ಧನಲಕ್ಷ್ಮಿ ಪೂಜೆ, ಹಾಗೂ ಗುರುಪೂಜೆಯು ಹರೀಶ್ ಶಾಂತಿ ಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಎಸ್ ಪಿ ಪೀತಾಂಬರ ಹೆರಾಜೆ, ಯೋಗೀಶ್ ಕಡ್ತಿಲ್ಲ, ಶ್ರೀಮತಿ ತಾರಾ ಜಗನ್ನಾಥ್, ಇಂಜಿನಿಯರ್ ಜಗದೀಶ್ ಪ್ರಸಾದ್, ರಾಘವೇಂದ್ರ ಬೈಪಾಡಿತಾಯ, ಅಶ್ರಫ್ ಅಲಿ, ರವೀಂದ್ರ ಆರ್ಲ, ಮಂಜುನಾಥ್ ಕಾಮತ್, ಅಖಿಲೇಶ್ ಕುಮಾರ್ ಶೆಟ್ಟಿ, ರಘುರಾಮ ಶೆಟ್ಟಿ, ಮೈತ್ರಿ ಜನಾರ್ಧನ್ ಹಾಗೂ ಇತರ ಗ್ರಾಹಕರು ಉಪಸ್ಥಿತರಿದ್ದರು.

ಮಹಾಪ್ರಬಂಧಕ ಅರುಣ್ ಕುಮಾರ್ ಜಿ ಕೋಟ್ಯಾನ್, ಶಾಖಾ ಪ್ರಬಂಧಕ ಉಮೇಶ್ ಕೋಟ್ಯಾನ್ ದಂಪತಿಗಳು, ಉಪಪ್ರಬಂಧಕಿ ಶ್ರೀಮತಿ ಶ್ವೇತಾ ಆರ್ ಪೂಜಾರಿ, ಸಿಬ್ಬಂದಿಗಳಾದ ಮಂಜುನಾಥ್, ಸುಧೀರ್ ಕೆ ಸಾಲಿಯಾನ್, ಸಂದೀಪ್ ಅಮೀನ್, ಭಾಸ್ಕರ್ ಬಂಗೇರ, ಸುದರ್ಶನ್ ಸುವರ್ಣ, ಇವರುಗಳು ಆಹ್ವಾನಿತರಗಳನ್ನು ಬರಮಾಡಿಕೊಂಡರು.

Related posts

ಕುರಾಯ ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವಕ್ಕೆ ನವಶಕ್ತಿ ಶಶಿಧರ ಶೆಟ್ಟಿ ಬರೋಡ ಭೇಟಿ

Suddi Udaya

ಉಜಿರೆ : ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಪುನಶ್ಚೇತನ ಶಿಬಿರ

Suddi Udaya

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತೆರಡನೆ ವರ್ಧಂತ್ಯುತ್ಸವ

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ ಕಾರ್ಯಾಗಾರ

Suddi Udaya

ಫೆ 27-ಮಾ 02: ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya
error: Content is protected !!