26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ

ಬೆಳ್ತಂಗಡಿ: ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ನ.11ರಂದು ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಜನರ ಹಿತಾಸಕ್ತಿ ಹಾಗೂ ಭಾವನೆಗೆ ವಿರುದ್ಧವಾಗಿ, ಜನರ ಜೀವನದ ಜೊತೆ ಚೆಲ್ಲಾಟ ಆಡುವಂತ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದರು ವಿರೋಧಿಸುತ್ತೇನೆ, ಬಿಜೆಪಿ ಸರಕಾರ ಮಾಡಿದರೂ ವಿರೋಧಿಸುತ್ತೇನೆ. ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಮಾಡುವಂತಹ ಹೋರಾಟದಲ್ಲಿ ನಾವೆಲ್ಲರೂ ಭಾಗವಹಿಸಿದರೆ ಮಾತ್ರ ನಮ್ಮ ಧ್ವನಿ ಸರಕಾರಕ್ಕೆ ಕೇಳುತ್ತದೆ ಎಂದರು.

ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ,ನ.15 ರಂದು ಗುಂಡ್ಯದಲ್ಲಿ ಜನಪ್ರತಿನಿದಿನಗಳ ಎದುರು ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರತಿಭಟನೆಯಲ್ಲಿ ಡಿಎಫ್ ಮತ್ತು ಡಿಸಿ ಯವರಿಗೆ ಮನವಿ ಕೊಡುವಂತಹದ್ದು, ಒಂದು ವೇಳೆ ಅವರು ಬರದಿದ್ದರೆ, ಅವರು ಬರುವ ವರೆಗೆ ಗುಂಡ್ಯ ರಸ್ತೆಯನ್ನು ತಡೆ ಹಿಡಿದು ಪ್ರತಿಭಟಿಸಿ ಡಿಎಫ್ ಮತ್ತು ಡಿಸಿ ರವರ ಕೈಯಲ್ಲೇ ಮನವಿಯನ್ನು ಕೊಡುವಂತಹದ್ದು. ರೈತರ ಉಳಿವಿಗಾಗಿ ಮಲೆನಾಡು ಹಿತ ರಕ್ಷಣಾ ವೇದಿಕೆ ಪಕ್ಷತೀತವಾಗಿ ಹಾಗೂ ಜಾತ್ಯತೀತವಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಂದರು.

ಕಸ್ತೂರಿ ರಂಗನ್ ವರದಿಯನ್ನು ಕೈ ಬಿಡುವಂತೆ ಕೋರಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿಲಾಯಿತು. ಪ್ರತಿಭಟನಾಕಾರರು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ತಾಲೂಕು ಕಚೇರಿಯವರೆಗೆ ಮೆರೆವಣಿಗೆ ಮೂಲಕ ಕಸ್ತೂರಿ ರಂಗನ್ ವರದಿ ವಿರುದ್ಧ ದಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ನಿವೃತ್ತ ಪ್ರಾಂಶುಪಾಲ ಅಂಟೋನಿ, ರೈತ ಸಂಘ ಜಿಲ್ಲಾಧ್ಯಕ್ಷ ಪ್ರಶಾಂತ್, ಪ್ರಮುಖರಾದ ಸದಾನಂದ ಉಂಗಿಲಬೈಲು, ಶಿರ್ಲಾಲು ಚರ್ಚ್ ನ ಫಾ. ಮ್ಯಾಥ್ಯು, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ್ ನಾವೂರು, ಶಿರ್ಲಾಲು ಪ್ರಾ.ಕೃ.ಪ. ಸ. ಸಂಘದ ಅಧ್ಯಕ್ಷ ನವೀನ್ ಸಾಮನಿ ಹಾಗೂ ವಿವಿಧ ಗ್ರಾಮದ ಪದಾಧಿಕಾರಿಗಳು, ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.

Related posts

ನಡ ಗ್ರಾಮದಲ್ಲಿ ಸನ್‌ರಾಕ್ ಬಲಿಪ ರೆಸಾರ್ಟ್ ಶುಭಾರಂಭ

Suddi Udaya

ಬೆಳ್ತಂಗಡಿ: 1867 ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮ

Suddi Udaya

ಕಲ್ಮಂಜ: ಸಿದ್ದಬೈಲು ಸ.ಹಿ ಪ್ರಾ. ಶಾಲೆಯ ನಿವೃತ್ತ ಶಿಕ್ಷಕ ಶಂಕರ ಎನ್ ತಾಮನ್ಕರ್ ರವರಿಗೆ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಿವಗಿರಿ ಯಾತ್ರೆ, ಹಲವಾರು ಕ್ಷೇತ್ರ ದರ್ಶನ

Suddi Udaya

ವೇಣೂರು ಗೋಳಿದಡ್ಕ ನಿವಾಸಿ ಮಂಜಪ್ಪ ದೇವಾಡಿಗ ನಿಧನ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಉಜಿರೆಯ ಪ್ರತೀಕ್ ಶೆಟ್ಟಿ ರಿಗೆ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ

Suddi Udaya
error: Content is protected !!