26.5 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬೆಳ್ತಂಗಡಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಬೆಂಬಲ

ಬೆಳ್ತಂಗಡಿ: ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ , ಬೆಳ್ತಂಗಡಿ. ಸಂಘಟನೆ ನ. 15 ರಂದು ಗುಂಡ್ಯದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಹಾಗೂ ಬೇರೆ ಬೇರೆ ಸಂಘಟನೆಗಳ ಒಡಗೂಡಿಕೆಯಿಂದ ನಡೆಯಲಿರುವ ಕಸ್ತೂರಿರಂಗನ್ ವರದಿ ವಿರುದ್ಧ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಕಸ್ತೂರಿ ರಂಗನ್ ವರದಿ ಹಾಗೂ ಇನ್ನೂ ಕೆಲವು, ಕೃಷಿಕರಿಗೆ ಹಾನಿ ಆಗುವ ಜ್ವಲಂತ ಸಮಸ್ಯೆಗಳಾದ ಅರಣ್ಯ ಕಂದಾಯ ಗಡಿಗುರುತು, ಕೆಲವು ಸರ್ವೆ ನಂಬರ್ ಗಳ ಸಮಸ್ಯೆ ಇತ್ಯಾದಿ ವಿಚಾರಗಳನ್ನು ಸರಿಪಡಿಸಿ ಅನ್ನದಾತರು ನೆಮ್ಮದಿಯಿಂದ ಬದುಕಲು ಬೇಕಾಗಿ ಹೋರಾಡುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದೇವೆ. ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ , ನಿರ್ಧೇಶಕ ವಂ. ಫಾ. ಆದರ್ಶ್ ಜೋಸೆಫ್ ಹಾಗೂ ಕೇಂದ್ರ ಸಮಿತಿ ಸದಸ್ಯರು ಈ ಬಗ್ಗೆ ಸಭೆ ಸೇರಿ ನಮ್ಮ ಸಮಾಜದವರ ಸಂಪೂರ್ಣ ಬೆಂಬಲ ಇರಲಿದೆ ಎಂದು ತಿಳಿಸಿದರು.

Related posts

ಉಜಿರೆ:ಎಸ್ ಡಿ ಎಮ್ ನಲ್ಲಿ ನೆನಪಿನಂಗಳ ಕಾರ್ಯಕ್ರಮ

Suddi Udaya

ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಮುಗೇರಡ್ಕ ಅಶೋಕ್ ಪಿ.ಎಲ್ ರವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರಿಂದ ಗೌರವಾರ್ಪಣೆ

Suddi Udaya

ಗಾಳಿ- ಮಳೆಗೆ ಕೋಳಿ ಸಾಕಾಣಿಕೆಯ ಶೆಡ್ ಕುಸಿದು ಬಿದ್ದು ಸಾವಿರಾರು ಕೋಳಿಗಳ ಸಾವು,ಲಕ್ಷಾಂತರ ರೂ ನಷ್ಟ

Suddi Udaya

ಬಳಂಜ ಶಾಲೆಯಲ್ಲಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಚಿಣ್ಣರ ಅಂಗಳಕ್ಕೆ ಶಿಲಾನ್ಯಾಸ

Suddi Udaya

ನಿಟ್ಟಡೆ ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಕುಂಭ ಕಾರ್ನಿವಾಲ್ ಕಾರ್ಯಕ್ರಮ

Suddi Udaya

ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅ.ಪ್ರೌ. ಶಾಲೆ ಮತ್ತು ಪ. ಪೂ. ಕಾಲೇಜಿನಲ್ಲಿ ಹಣ್ಣಿನ ಗಿಡಗಳ ನಾಟಿ

Suddi Udaya
error: Content is protected !!