25.6 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಪ್ರದಾನ ಕಾರ್ಯಕ್ರಮ

ಉಜಿರೆ: ತನ್ನತನ ಕಳೆದುಕೊಳ್ಳದೆ ಸತ್ತ್ವಭರಿತವಾಗಿ ಬೆಳೆದುಕೊಂಡು ಬಂದ ಭಾಷೆಯೇ ಸಂಸ್ಕೃತವಾಗಿದೆ. ಸಂಸ್ಕಾರ ಭರಿತ ಭಾಷೆ ಮಾತ್ರವಲ್ಲದೆ ಇತರ ಭಾಷೆಗಳ ಮೇಲೆ ಹಿಡಿತ ಸಾಧಿಸದೆ , ದಾಷ್ಟ್ಯತೋರದೆ ಅನೇಕ ಭಾಷೆಗಳನ್ನು ಬೆಳೆಸಿದ ಭಾಷೆ ಇದ್ದರೆ ಅದು ಸಂಸ್ಕೃತ ‘ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಅವರು ಹೇಳಿದರು.

ಇವರು ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಭ್ಯಾತರಾಗಿ ಆಗಮಿಸಿದ ಕನ್ಯಾಡಿಯ ಸಂಸ್ಕೃತ ವಿದ್ವಾಂಸರಾದ ಡಾ. ಶ್ರೀಕಾಂತ ಬಾಳ್ತಿಲ್ಲಾಯ ಅವರು ‘ ದೇಹ , ಮನಸ್ಸು ಹಾಗೂ ಮೆದುಳುಗಳ ಕ್ರಿಯೆಗಳಿಗೆ ಪ್ರತಿಕ್ರಿಯೆಯಾಗಿ ಅಂತಃಕರಣ ಸ್ಪರ್ಶವು ಅಗತ್ಯವಾಗಿದೆ. ಇದಕ್ಕೆ ಸಂಸ್ಕೃತವು ಅಗತ್ಯ. ಇದರಿಂದ ಸಂಸ್ಕಾರ ಭರಿತ ಜೀವನ ನಮ್ಮದಾಗುತ್ತದೆ. ಅದೆಷ್ಟೋ ಸಂಸ್ಕೃತ ಮಂತ್ರಗಳು ಹಾಗೂ ಶ್ಲೋಕಗಳಿಂದ ನಮ್ಮ ಜೀವನ ಪರಿವರ್ತನೆಗೊಳಿಸಿಕೊಳ್ಳಲು ಸಾಧ್ಯ ‘ ಎಂದು ನುಡಿದರು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಸಂಸ್ಕೃತ ಭಿತ್ತಿಪತ್ರಿಕೆ ‘ ಸುಬೋಧಿನೀ ‘ ಹಾಗೂ ಪದಾಧಿಕಾರಿಗಳ ವಿವರದ ಡಿಜಿಟಲ್ ಪತ್ರಿಕೆಯನ್ನು ಅನಾವರಣ ಮಾಡಲಾಯಿತು.

ಮನ್ವಿತಾ ಹಾಗೂ ಅಹಲ್ಯಾ ಪ್ರಾರ್ಥಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷೆ ಅಕ್ಷರ ಸ್ವಾಗತಿಸಿ , ಅನುಷಾ ಪರಿಚಯಿಸಿದರು. ಸಹ ಕಾರ್ಯದರ್ಶಿ ಟಿ.ಪಿ ಹಿತಾ ನಿರೂಪಿಸಿ , ಸಂಸ್ಕೃತ ಅಂತರಾಧ್ಯಯನ ವೃತ್ತಂ ಇದರ ಸಂಯೋಜಕಿ ಕವನಾ ಜೈನ್ ವಂದಿಸಿದರು.

Related posts

ಪ್ರತಿಭಾ ಕಾರಂಜಿ: ಬಜಿರೆ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ ರಕ್ಷಿತ್ ಶಿವಾರಾಂ ರವರ ಸಹೋದರಿ ನಟ ವಿಜಯರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಹೃದಯಾಘಾತದಿಂದ ನಿಧನ

Suddi Udaya

ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಅಕ್ರಮ – ಸಕ್ರಮ ಸಮಿತಿ ಸಭೆ; ಅರ್ಹ 28  ಮಂದಿ  ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ  ವಿತರಣೆ

Suddi Udaya

ಇಲಾಖಾ ಅಧಿಕಾರಿಗಳು ಗೈರಾದ ಹಿನ್ನಲೆ ಕೊಕ್ಕಡ ಗ್ರಾ.ಪಂ ತ್ರೈಮಾಸಿಕ ಕೆ.ಡಿ.ಪಿ ಸಭೆ ರದ್ದು

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಂ ಭೇಟಿ

Suddi Udaya

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya
error: Content is protected !!