26.5 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ

ಸಂಡೂರು : ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಅಂಬೆಗಾಲಿಡುವ ಕೂಸು ಎನ್ನುವ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಶ್ರೀ ಕೃಷ್ಣ ಪರಮಾತ್ಮ ಅಂಬೆಗಾಲಿಡುವಾಗಲೇ ಅಸುರೀ ಶಕ್ತಿಗಳನ್ನು ನಾಶ ಪಡಿಸಿರುವುದು ಎಂದು ತಿರುಗೇಟು ನೀಡಿದ್ದಾರೆ.

ಹಗರಣ, ಮತಾಂಧ ಶಕ್ತಿಗಳ ಓಲೈಕೆಯ ಮೂಲಕ ರಾಜ್ಯದ ಜನತೆಯ ರಕ್ತ ಹೀರುತ್ತಿರುವ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ರಾಕ್ಷಸಿ ಮನೋಭಾವವನ್ನು ನಿಯಂತ್ರಿಸಲು ಶ್ರೀ ಕೃಷ್ಣನ ಚಿಂತನೆಗಳ ಅಗತ್ಯವಿದೆ. ಬಿಜೆಪಿ ರಾಜ್ಯಾದ್ಯಕ್ಷರನ್ನು ಅಂಬೆಗಾಲಿಡುವ ಕೂಸು ಎಂದಿರುವ ಸಿದ್ಧರಾಮಯ್ಯ ಅವರು ಶ್ರೀ ಕೃಷ್ಣನ ಬಾಲ್ಯದಲ್ಲಿ ಪೂತನಿ, ಶಕಟಾಸುರ,ತೃಣಾವರ್ತರಂತಹ ಅಸುರೀ ಶಕ್ತಿಗಳನ್ನು ಅಂಬೆಗಾಲಿಡುತ್ತಲೇ ಧಮನಿಸಿರುವುದು ಎನ್ನುವುದನ್ನು ಮರಿಯಬಾರದು‌. ರಾಜ್ಯದಲ್ಲಿ ಕಾಂಗ್ರೆಸ್ ನಡೆಸುವ ದುಷ್ಕೃತ್ಯಗಳನ್ನು ನಿಯಂತ್ರಿಸಲು ಅಂಬೆಗಾಡುವ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ.

ಮತಾಂಧರ ಮತ ಬ್ಯಾಂಕ್ ರಾಜಕೀಯಕ್ಕೆ ಹಿಂದೂ ಸಮಾಜದ ಮೇಲೆ ರಾಕ್ಷಸರಂತೆ ಎರಗುವ ಕಾಂಗ್ರೆಸಿನ ವಿರುದ್ಧ ಇಡೀ ಸಮಾಜ ಒಗ್ಗಟ್ಟಿನಿಂದ ನಿಲ್ಲಲಿದೆ.ಹಿಂದೂ ಸಮಾಜದ ಭೂಮಿಯನ್ನು ವಕ್ಫ್ ಬೋರ್ಡಿಗೆ ಹಂಚುತ್ತಿರುವ ಸರಕಾರದ ಅವನತಿಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಾವೆಲ್ಲರೂ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಗುಡುಗಿದ್ದಾರೆ.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಗೆ ಶೇ.100 ಫಲಿತಾಂಶ

Suddi Udaya

ಉಜಿರೆ: ಮಾಚಾರಿನಲ್ಲಿ ಶ್ರೀ.ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ವಾತ್ಸಲ್ಯ ಮನೆಗೆ ಕೆಸರು ಕಲ್ಲು ಹಾಕಿ ಮನೆ ನಿರ್ಮಾಣಕ್ಕೆ ಚಾಲನೆ

Suddi Udaya

ಜ.17-18: ಬಂದಾರು ಕೊಂಕನೊಟ್ಟು ತರವಾಡು ಮನೆಯಲ್ಲಿ ಸಾನಿಧ್ಯ ದೈವಗಳ ನೇಮೋತ್ಸವ

Suddi Udaya

ನಾರಾವಿ ಸಹಕಾರಿ ಸಂಘದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಕ್ತಿ: ಉಚಿತ ಪುಸ್ತಕ ವಿತರಣೆ ದೇವಾಲಯ ಮತ್ತು ಶಾಲೆ ಊರಿಗೆ ಕಲಶವಿದ್ದಂತೆ: ಶಾಸಕ ಪೂಂಜ

Suddi Udaya

ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ – ಡಿ .ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ: ‌ಸುದ್ದಿ ಉದಯ ಪತ್ರಿಕೆಯ ಸ್ಪೆಷಲ್ ರಿಪೋರ್ಟ್ ಗೆ ಸಾರ್ವಜನಿಕರ ವ್ಯಾಪಕ ಮೆಚ್ಚುಗೆ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya
error: Content is protected !!