ತೆಕ್ಕಾರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿ ಪ್ರಧಾನ ಅಂಗಗಳಲ್ಲೊಂದಾದ ಷಡಾಧಾರ ಪ್ರತಿಷ್ಠ ಹಾಗೂ ಗರ್ಭನ್ಯಾಸ ಕಾರ್ಯಕ್ರಮ ನ.೧೩ರಂದು ಬ್ರಹ್ಮಶ್ರೀ ವೇ.ಮೂ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮತ್ತು ವಾಸ್ತು ತಜ್ಞರಾದ ಪಿ.ಜಿ. ಜಗನ್ನಿವಾಸ ರಾವ್ ಪುತ್ತೂರು ಇವರ ನೇತೃತ್ವದಲ್ಲಿ ದೇವರಗುಡ್ಡೆ ಭಟ್ರಬೈಲು ತೆಕ್ಕಾರುನಲ್ಲಿ ನಡೆಯಿತು.
ಬೆಳಿಗ್ಗೆ ಗೋಪಾಲಕೃಷ್ಣ ದೇವರ ವಿಶೇಷ ಪೂಜೆ, ಪ್ರಾರ್ಥನೆ, ಪುಣ್ಯಾಹ, ಮುಷ್ಟಿ ಆದಿ ಶುದ್ಧಿ, ಆಧಾರ ಶಿಲೆ ಪ್ರತಿಷ್ಠೆ, ನಿಧಿಕುಂಭ, ಪದ್ಮ ಕೂರ್ಮ ಹಾಗೂ ಯೋಗನಾಳ ಪ್ರತಿಷ್ಠಾ ಕ್ರಿಯೆಗಳು, ದಕ್ಷಿಣ ಭಾಗದಲ್ಲಿ ಗಣಪತಿ, ದಕ್ಷಿಣಮೂರ್ತಿ ಸಂಕಲ್ಪ ಪ್ರತಿಷ್ಠೆ, ರಾತ್ರಿ ವಾಸ್ತು ಬಲಿ, ಗರ್ಭಪಾತ್ರೆ ಸಂಸ್ಕಾರ ಹೋಮ, ಕಲಶಪೂರಣ, ಗರ್ಭನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಸಂಸದ ಕಿಶೋರ್ ಕುಮಾರ್ ಪುತ್ತೂರು, ಟ್ರಸ್ಟ್‌ನ ಅಧ್ಯಕ್ಷ ನಾಗಭೂಷಣ್ ರಾವ್, ಸಂಚಾಲಕ ಉದ್ಯಮಿ ಲಕ್ಷ್ಮಣ ಭಟ್ರಬೈಲು, ತಾ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ, ಬಾರ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರವೀಣ್ ರೈ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಸದಸ್ಯರು, ಗೋಪಾಲಕೃಷ್ಣ ಸೇವಾ ಟ್ರಸ್ಟಿಗಳು, ಊರಿನ ಭಕ್ತರು ಉಪಸ್ಥಿತರಿದ್ದರು.