23.5 C
ಪುತ್ತೂರು, ಬೆಳ್ತಂಗಡಿ
April 4, 2025
ಜಿಲ್ಲಾ ಸುದ್ದಿ

ಉಜಿರೆಯಲ್ಲಿ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್ ಉದ್ಘಾಟನೆ

  • ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 8,9 ಹಾಗೂ 10ನೇ ತರಗತಿಯ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಬೆಳ್ತಂಗಡಿ : ರೋಟರಿ ಇಂಟರಾಕ್ಟ್ ಜಿಲ್ಲೆ 3181 ನ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್ – 2024ನ್ನು ನ.17ರಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಇಂಟರಾಕ್ಟ್ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ರೊ. ವಿಕ್ರಂದತ್ತ, ಜಿಲ್ಲಾ ಡಿಐಆರ್ ಲಿಖಿತ, ಡಿಸ್ಟ್ರಿಕ್ಟ್ ಗವನ೯ರ್ ಇಲೆಕ್ಟ್ ರಾಮಕೃಷ್ಣ, ಡಿಸ್ಟ್ರಿಕ್ಟ್ ಗವನ೯ರ್ ನಾಮಿನಿ ಸತೀಶ್ ಬೊಳಾರ್, ಡಿಸ್ಟ್ರಿಕ್ಟ್ ಕೌನ್ಸಿಲರ್ ದೇವದಾಸ್, ಕ್ಲಬ್ ನ ಎ.ಜಿ ಮಹಮ್ಮದ್ ವಳವೂರು ಮತ್ತು ಜಯರಾಮ, ಜಿಲ್ಲಾ ಕಾಯ೯ದಶಿ೯ ವಿತೇಶ್ ಬಾಳಿಗಾ, ಝೊನಲ್ ಲೆಫ್ಟಿನೆಂಟ್ ಮನೋರಮಾ, ಇಂಟರ್ ಚೇಯರ್ ಮೆನ್ ಡಾ.ಜಯಕುಮಾರ್ , ಬೆಳ್ತಂಗಡಿ ರೋಟರಿ ಕಾಯ೯ದಶಿ೯ ಸಂದೇಶ ರಾವ್ ಭಾಗವಹಿಸಿದ್ದರು.ರೋ. ಪೂರನ್ ವರ್ಮ ಅಧ್ಯಕ್ಷರು ರೋಟರಿ ಕ್ಲಬ್, ಬೆಳ್ತಂಗಡಿ ಸ್ವಾಗತಿಸಿದರು.
ರೋಟರಿಯ ಜಿಲ್ಲೆಯ ವಿವಿಧ ಪದಾಧಿಕಾರಿಗಳುಭಾಗವಹಿಸಿದ್ದಾರೆ.

ಯೂತ್ ಕಾರ್ನಿವಾಲ್ ಪ್ರಯುಕ್ತ ನ.16 ರ ಸಂಜೆ 5 ಗಂಟೆಯಿಂದ ವಿಷಯಾಧಾರಿತ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ ನಡೆಯಿತು .ಜೊತೆಗೆ ಹಾಡು, ರಸಪ್ರಶ್ನೆ, ಭಾಷಣ ಸ್ಪರ್ಧೆ, ಛದ್ಮವೇಷ ಹಾಗೂ ಪ್ರಬಂಧ ಬರಹ ಸ್ಪರ್ಧೆಗಳು ನಡೆಯಿತು.
ಇದರ ಜೊತೆಗೆ ವ್ಯಕ್ತಿತ್ವ ವಿಕಸನ ಶಿಬಿರಗಳು, ಇಂಟರಾಕ್ಟರ್-ಗಳ ಕೌಶಲ್ಯ ಪ್ರದರ್ಶಿಸುವ ವಸ್ತುಪ್ರದರ್ಶನ ಹಾಗೂ ವೈವಿಧ್ಯಮಯ ಆಹಾರದ ವ್ಯವಸ್ಥೆ. ಅಂತೆಯೇ ಯೂತ್ ಕಾರ್ನಿವಾಲ್ ಪುಯುಕ್ತ ಲಕ್ಕಿ ಗೇಮ್ಸ್, ಕರಾವಳಿಯ ಸಾಂಪ್ರದಾಯಿಕ ಆಟಗಳ ಸ್ಪರ್ಧೆ ಮೊದಲಾದ ಚಟುವಟಿಕೆಗಳನ್ನು ಕೂಡಾ ನಡೆಯಲಿದೆ.

ಬೆಳ್ತಂಗಡಿಯ ರೋಟರಿ ಕ್ಲಬ್ ಆಯೋಜಿಸಿರುವ ಈ ಯೂತ್ ಕಾರ್ನಿವಾಲ್-ನಲ್ಲಿ ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 8,9 ಹಾಗೂ 10ನೇ ತರಗತಿಯ ಸುಮಾರು 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

Related posts

ಸರಣಿ ಕಳ್ಳತನಗೈಯ್ಯುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ: ಕಾರ್ಕಳ ತಾಲೂಕು ನಿಟ್ಟೆ ಅಜ್ಜೊಟ್ಟು ನಿವಾಸಿ ಸುರೇಶ ಕೆ ಪೂಜಾರಿ ಬಂಧಿತ ಆರೋಪಿ

Suddi Udaya

ಮಚ್ಚಿನ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ಹಿರಿಯ ಸಾಹಿತಿ ಎನ್ ಜಿ ಪಟವರ್ಧನ್ ಅವರ ಕೃತಿ ‘ಆಟ’ ಲೋಕಾರ್ಪಣೆ

Suddi Udaya

ವೇಣೂರು ಎಸ್.ಡಿ.ಎಮ್. ಐಟಿಐ ಮತ್ತು ಟೊಯೋಟಾ ಒಡಂಬಡಿಕೆ

Suddi Udaya

ಅಂಡಿಂಜೆ: ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಕಿರು ಸೇತುವೆ, ಸಂಪರ್ಕ ಸ್ಥಗಿತ

Suddi Udaya

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರ ಸಮ್ಮೇಳನವಾಗಲಿ – ಶಾಸಕ ಹರೀಶ್ ಪೂಂಜ

Suddi Udaya
error: Content is protected !!