24.8 C
ಪುತ್ತೂರು, ಬೆಳ್ತಂಗಡಿ
April 1, 2025
Uncategorized

ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಹಿರಿಯ ಸಮಾಜಸೇವಕ ದಿ| ಬಿ.ಉಮೇಶ್ ಕುಲಾಲ್ ಮಂಚಿ ರವರ ಪುಣ್ಯಸ್ಮರಣೆ

ಬೆಳ್ತಂಗಡಿ: ನ .14 ರಂದು ಬೆಳ್ತಂಗಡಿ ಗುಂಡೂರಿ ಗ್ರಾಮ.ಶ್ರೀಗುರುಚೈತನ್ಯಸೇವಾಶ್ರಮ ಗುಂಡೂರಿ ಬೆಳ್ತಂಗಡಿ ತಾಲೂಕು ಇಲ್ಲಿ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಹಿರಿಯ ಸಮಾಜಸೇವಕ ನಿವೃತ್ತ ಸರಕಾರಿ ಉದ್ಯೋಗಿ ದಿವಂಗತ ಬಿ.ಉಮೇಶ್ ಕುಲಾಲ್ ಮಂಚಿ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕ್ಕೂಳ್ಳಲಾಯಿತು.
ಮೃತರು ತನ್ನ 19 ನೇ ವಯಸ್ಸಿನಲ್ಲಿ ಸರಕಾರಿ ಶ್ಯಾನುಭೋಗರಾಗಿ ದುಡಿದು ನಂತರ ಗ್ರಾಮಲೆಕ್ಕಿಗರಾಗಿ ಸರಕಾರಿ ಸೇವೆ ಸಲ್ಲಿಸಿದ್ದಾರೆ.ಈ ಸಂಧರ್ಭದಲ್ಲಿ ಅದೆಷ್ಟೋ ಬಡಕುಟುಂಬಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಿಗುವಂತೆ ಪ್ರಾಮಾಣಿಕ ಪ್ರಯತ್ನಪಟ್ಟವರು.ನಿವೃತ್ತಿ ಜೀವನದಲ್ಲಿ ಧಾರ್ಮಿಕ,ಸಮಾಜಿಕ ಸೇವೆಯಲ್ಲಿ ತೊಡಗಿ ಜನರ ಮದ್ಯೆ ಬೆರೆತವರು, ಪನೋಲಿಬೈಲ್ ಕ್ಷೇತ್ರದ ಅಭಿವೃದ್ಧಿ ಸಮಿತಿಯಲ್ಲಿ ತೊಡಗಿಸಿದ ಇವರು ಕ್ಷೇತ್ರದ ಆಡಳಿತದ ದೋಷದ ವಿರುದ್ದ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟದಲ್ಲಿ ಇವರ ಹೆಸರು

ಮುಂಚೂಣಿಯಲ್ಲಿದೆ.ಇವನ್ನೆಲ್ಲಾ ಗಮನಿಸಿದ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ಇವರ ಸೇವೆಯನ್ನು ನೆನಪಿಸಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು ಎಂದು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ದ ಹೊನ್ನಯ್ಯ ಕುಲಾಲ್ ರವರು ವಿವರಿಸಿದರು. ಈ ಕಾರ್ಯಕ್ರಮ ದ ನಿಮಿತ್ತ ಸೇವಾಶ್ರಮ ದ ಆರಾಧ್ಯ ಗುರು ರಾಯರಿಗೆ ಪೂಜೆ ಸಲ್ಲಿಸಲಾಯಿತು.. ಆಶ್ರಮವಾಸಿಗಳಿಗೆ ಹಾಗು ಬಂದಂತಹ ಸಭಿಕರಿಗೆ ಸಿಹಿಊಟ ಹಂಚಲಾಯಿತು.ಅಥಿತಿಗಳಾಗಿ ಹಿರಿಯರಾದ ನಿವೃತ್ತ ಅಂಚೆ ಸಿಬ್ಬಂದಿ ಅರಂಬೋಡಿ ಕುಂಜ್ಞಪ್ಪ ಕುಲಾಲ್, ಸಿದ್ಧಕಟ್ಟೆ ಜನೌಷದಿ ಮಾಲಕ ಮನೋಜ್ ಕುಲಾಲ್,ನಡ್ತಿಕಲ್ ಸಮಾಜಸೇವಾ ಸಂಘದ ಉಪಾಧ್ಯಕ್ಷೆ ಶ್ರೀಮತಿ ರಮ್ಯಾ ಕುಮಾರ್ ಕುಲಾಲ್, ಸಿದ್ಧಕಟ್ಟೆ ಕುಲಾಲ ಸಂಘದ ಸದಸ್ಯೆ ಶ್ರೀಮತಿ ಉಷಾ ಕೃಷ್ಣ ಕುಲಾಲ್ ಉಪಸ್ಥಿತರಿದ್ದರು.. ಹೊನ್ನಯ್ಯ ಕುಲಾಲ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು

Related posts

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

Suddi Udaya

ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವಂತೆ ವಿಧಾನಸಭೆಯಲ್ಲಿ ಆಗ್ರಹ

Suddi Udaya

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೀಡಿಯೊ ಹಾಗೂ ಮಾಹಿತಿಪತ್ರ ಅನಾವರಣ

Suddi Udaya

ರೋಟರಿ ಕ್ಲಬ್ ವತಿಯಿಂದ ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಗೆ ಟೇಬಲ್ ಮತ್ತು ಚೇರ್ ವಿತರಣೆ

Suddi Udaya

ಮುಂಡಾಜೆ ಗ್ರಾ.ಪಂ. ಹಾಗೂ ನೇತ್ರಾವತಿ ಸಂಜೀವಿನಿ ಒಕ್ಕೂಟದ ವತಿಯಂದ ಮಹಿಳಾ ಗ್ರಾಮ ಸಭೆ ಮತ್ತು ವಿಚಾರ ಸಂಕಿರಣ

Suddi Udaya

ಅರಸಿನಮಕ್ಕಿ: ಕುಲಾಲರ ಸಂಘದ ವಿಶೇಷ ಮಾಸಿಕ ಸಭೆ

Suddi Udaya
error: Content is protected !!