July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಧರ್ಮಸ್ಥಳ ಯಕ್ಷಗಾನ ಮೇಳ: ಸೇವೆ ಬಯಲಾಟ ಪ್ರದರ್ಶನ

ಧರ್ಮಸ್ಥಳ : ನಾಡಿನ ಪವಿತ್ರ ಕ್ಷೇತ್ರ  ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ.
(ನ.21) ಇಂದಿನಿಂದ 2025ರ ಮೇ 23ರ ವರೆಗೆ ಭಕ್ತಾದಿಗಳ ವತಿಯಿಂದ ಸೇವೆ ಬಯಲಾಟ ಪ್ರದರ್ಶನ ಆಯೋಜಿಸಲಾಗಿದೆ.
ಕಳೆದ ಏಳು ವರ್ಷಗಳಿಂದ ಸಂಜೆ ಗಂಟೆ 7 ರಿಂದ ರಾತ್ರಿ 12 ಗಂಟೆ ವರೆಗೆ ಕಾಲಮಿತಿಯ ಬಯಲಾಟ ಪ್ರದರ್ಶನ ಆಯೋಜಿಸಲಾಗುತ್ತಿದೆ. ಇದರಿಂದಾಗಿ ಕಲಾಭಿಮಾನಿ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ, ಪ್ರೋತ್ಸಾಹ ಬರುತ್ತಿದೆ. ಕಲಾವಿದರಿಗೂ  ಹೆಚ್ಚಿನ ಅಧ್ಯಯನ, ಅಭ್ಯಾಸಕ್ಕೂ ಅನುಕೂಲವಾಗುತ್ತದೆ.
ಸಾಂಪ್ರದಾಯಿಕ ವೇಷಭೂಷಣಗಳು, ಜಾನಪದ ಶೈಲಿಯ ಪರಂಪರೆಯ ಪ್ರದರ್ಶನ, ಕೇವಲ ಪೌರಾಣಿಕ ಪ್ರಸಂಗಗಳ ಪ್ರದರ್ಶನ ಧರ್ಮಸ್ಥಳ ಮೇಳದ ವೈಶಿಷ್ಟ್ಯವಾಗಿದೆ. ಸೇವೆ ಬಯಲಾಟ ಪ್ರದರ್ಶನದೊಂದಿಗೆ ಧರ್ಮಪ್ರಭಾವನೆ ಹಾಗೂ ನೈತಿಕ ಮೌಲ್ಯಗಳ ಉದ್ದೀಪನಕ್ಕೂ ಪ್ರೋತ್ಸಾಹ ನೀಡಲಾಗುತ್ತದೆ.


ಸೇವೆ ಬಯಲಾಟ ಪ್ರದರ್ಶನದ ಊರುಗಳಲ್ಲಿ ಮೇಳದ ಜೊತೆ ಇರುವ ಶ್ರೀ ಮಹಾಗಣಪತಿ ದೇವರನ್ನು ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.

Related posts

ಪರೀಕ ಆತ್ರಾಡಿ ಮಸೀದಿಯಿಂದ ಶ್ರೀನಿವಾಸ ದೇವಸ್ಥಾನದವರೆಗೆ ಅಗಲೀಕರಣದೊಂದಿಗೆ ಡಾಮರೀಕರಣಕ್ಕೆ ಚಾಲನೆ

Suddi Udaya

ಭಾರೀ ಮಳೆಗೆ ತೆಕ್ಕಾರು ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ನೂತನ ಮನೆಯ ಕಾಂಪೌಂಡ್ ಕುಸಿತ

Suddi Udaya

ಸಾಮಾಜಿಕ ಜಾಲಾತಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ವಿರುದ್ಧ ನಿಂದನಾತ್ಮಕ ಹೇಳಿಕೆ ಪ್ರಸಾರ ಆರೋಪ : ಖಾಸಗಿ ವೆಬ್ ನ್ಯೂಸ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಶಿಶಿಲ ಒಟ್ಲ ಗರಡಿಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಸಿಯೋನ್ ಆಶ್ರಮ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

Suddi Udaya
error: Content is protected !!