28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯಲ್ಲಿ ಯುವವಾಹಿನಿಯಿಂದ “ಡೆನ್ನಾನ ಡೆನ್ನನ” ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ

ಬೆಳ್ತಂಗಡಿ: ಸ್ವಾತಂತ್ರ್ಯ ಬಂದ ನಂತರ ಸುಮಾರು ಶೇ.76 ಸಾಕ್ಷರತೆ ಹೊಂದಿದೆ ದೇಶ ನಮ್ಮದು. ಸಾಂಸ್ಕೃತಿಕ ಕಾರ್ಯಕ್ರಮದಿಂದ ಜನರಲ್ಲಿ ಜಾಗೃತಿ ಮೂಡಿ ಸಮಾಜದ ಸುಧಾರಣೆಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು‌

ಅವರು ಡಿ.1 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಬೆಳ್ತಂಗಡಿ ಯುವವಾಹಿನಿ ಘಟಕದ ಅತಿಥ್ಯದಲ್ಲಿ,ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಹಯೋಗದೊಂದಿಗೆ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆದ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ-2024 ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ನಮ್ಮನ್ನು ಹೆತ್ತು,ಹೊತ್ತು ಸಾಕಿ ಸಲಹಿದ ತಂದೆ ತಾಯಿ ನಮ್ಮ ನಿಜವಾದ ದೇವರು. ಆದ್ದರಿಂದ ಹೆತ್ತವರನ್ನು ಪ್ರೀತಿಯಿಂದ ಕಾಣಬೇಕು.ಯುವವಾಹಿನಿ ಬಲಿಷ್ಠ ಸಂಘಟನೆ. ಅದ್ಬುತ ಕೆಲಸ ನಡೆಯುತ್ತಿದೆ ಎಂದು ಶ್ಳಾಘಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಪ್ರಧಾನ‌ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ ತುಳುವರನ್ನು ಜಾತಿ, ಮತ, ಧರ್ಮ ಭೇದವಿಲ್ಲದೇ ಬೆಸೆಯುವ ಶಬ್ಧವೇ ಡೆನ್ನನ ಡೆನ್ನಾನ. ಡೆನ್ನನ ಡೆನ್ನಾನ ಶಬ್ಧವೇ ತುಳುವರಿಗೆ ರೋಮಾಂಚಕ ಎಂದರು‌

ಈ ಸಂದರ್ಭದಲ್ಲಿ ಸಾಧಕ‌ ನರೇಶ್ ಕುಮಾರ್ ಸಸಿಹಿತ್ಲು ಅವರಿಗೆ ಪ್ರತಿಷ್ಠಿತ ಡೆನ್ನಾನ ಡೆನ್ನನ ರಂಗ ಸಮ್ಮಾನ್ 2024 ನೀಡಿ ಗೌರವಿಸಲಾಯಿತು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ‌ ಕೇಂದ್ರ ಸಮಿತಿ ಅದ್ಯಕ್ಷ ಹರೀಶ್ ಕೆ ಪೂಜಾರಿ ಬೈಲಬರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ,ರಾಜ್ಯ ಧಾರ್ಮಿಕ ಪರಿಷತ್ ಮಾಜಿ‌ ಅಧ್ಯಕ್ಷ ಪದ್ಮನಾಭ ಕೋಟ್ಯಾನ್,ಬೆಂಗಳೂರು ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಚಿರಾಗ್ ತೋನ್ಸೆ,ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು,ಉಪಾಧ್ಯಕ್ಷ ಸುಂದರ ಪೂಜಾರಿ ಬೆಳ್ತಂಗಡಿ,ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಅನಿಲ್ ಕುಮಾರ್,ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾಶಿವ ಪೂಜಾರಿ ಊರ ಉಪಸ್ಥಿತರಿದ್ದರು.

ಡೆನ್ನಾನ ಡೆನ್ನನ ಕಾರ್ಯಕ್ರಮದ ಪ್ರಧಾನ ಸಂಚಾಲಕ ಪ್ರಶಾಂತ್ ಮಚ್ಚಿನ,ಕೇಂದ್ರ ಸಮಿತಿ ಸಾಂಸ್ಕೃತಿಕ‌ ನಿರ್ದೇಶಕ ಹರೀಶ್ ಸುವರ್ಣ,ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ,ಸಾಂಸ್ಕೃತಿಕ ನಿರ್ದೇಶಕ ಹರೀಶ್ ಕಳಿಯ,ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ.ಸಂಘದ ಪ್ರ.ಕಾರ್ಯದರ್ಶಿ ನಿತೀಶ್ ಕೋಟ್ಯಾನ್,ಯುವವಾಹಿನಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಯಶೋಧರ ಮುಂಡಾಜೆ ಹಾಗೂ ಸಮಿತಿ ಸದಸ್ಯರು ಸಹಕರಿಸಿದರು.

ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ ಪ್ರಸಾದ್ ಸ್ವಾಗತಿಸಿದರು,ಯುವ ಸಾಹಿತಿ ಚಂದ್ರಹಾಸ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು. ಯುವವಾಹಿನಿ ಮಾಜಿ ಅಧ್ಯಕ್ಷ ರಾಕೇಶ್ ಮೂಡುಕೋಡಿ ವಂದಿಸಿದರು.ಪ್ರಜ್ಞ್ನಾ ಒಡಿಲ್ನಾಳ,ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ‌ ನಿರೂಪಿಸಿದರು.

Related posts

ಜೆಇಇ ಪರೀಕ್ಷೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Suddi Udaya

ಉಜಿರೆ: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಶತಮಾನೋತ್ಸವ ಆಚರಣೆ ಪ್ರಯುಕ್ತ ಪೂರ್ವಭಾವಿ ಸಭೆ

Suddi Udaya

ನಿಕಟ ಪೂರ್ವ ರಾಜಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶ್ರೀ ರಾಮಸ್ವಾಮಿ(ವಿಸಿಎನ್ಆರ್ ಗ್ರೂಪ್) ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವ

Suddi Udaya

ನಾರಾವಿ ಬಂಟರ ವಲಯದ ಕೊಕ್ರಾಡಿ ಗ್ರಾಮ ಸಮಿತಿ ಸಭೆ

Suddi Udaya

ಪೆರಿಂಜೆ: ಕಣಜದ ಹುಳ ಕಡಿದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya
error: Content is protected !!