25.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಳದಂಗಡಿ ಸ.ಪ.ಪೂ. ಕಾಲೇಜಿಗೆ ಕಂಪ್ಯೂಟರ್ ಸ್ಮಾರ್ಟ್ ತರಗತಿ ಉದ್ಘಾಟನೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿಯ ವಿದ್ಯಾರ್ಥಿಗಳಿಗೆ ಒದಗಿಸಿದ ಕಂಪ್ಯೂಟರ್ ಸ್ಮಾರ್ಟ್ ತರಗತಿ ವ್ಯವಸ್ಥೆಯ ಉದ್ಘಾಟನೆಯು ಇತ್ತೀಚೆಗೆ ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಇವರು ವಹಿಸಿ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದೊರಕಿಸುವಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸಹಕಾರ ಅತ್ಯಂತ ಗಮನಾರ್ಹವಾದುದು ಎಂದರು.

ಸಮಾರಂಭದ ಉದ್ಘಾಟನೆಯನ್ನು ಪ್ರೊಜೆಕ್ಟರ್ ಸ್ಲೈಡ್ ಮೂಲಕ ನೆರವೇರಿಸಿದ ದಕ್ಷಿಣ ಕನ್ನಡ ಜಿಲ್ಲಾ ಗವರ್ನರ್ ಲಯನ್ ಬಿ ಎಂ ಭಾರತಿ(PMJF) ಇವರು ವಿದ್ಯಾರ್ಥಿಗಳು ಕಂಪ್ಯೂಟರ್ ತರಗತಿಯ ಸಂಪೂರ್ಣ ಪ್ರಯೋಜನವನ್ನು ಪಡೆದು ಸ್ಪರ್ಧಾತ್ಮಕವಾಗಿ ಬೆಳೆಯಬೇಕು. ತಾವು ಕೂಡ ತಾಂತ್ರಿಕ ಕೌಶಲಗಳಿಂದ ಇತರರಿಗೆ ಸರಿಸಾಟಿಯಾಗಿ ತಂತ್ರಜ್ಞಾನದಲ್ಲಿ ಸ್ಪರ್ಧೆ ನೀಡಬೇಕು ಎಂದರು.

ಕೊಡುಗೆ ನೀಡಿದ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರು ಮತ್ತು ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿಯವರಾದ ಲಯನ್ ಗೀತಾ ಎಸ್ ರಾವ್, ಚೀಫ್ ರೀಜನಲ್ ಅಧ್ಯಕ್ಷ ಲಯನ್ ವೆಂಕಟೇಶ್ ಹೆಬ್ಬಾರ್, ವಿಭಾಗೀಯ ಅಧ್ಯಕ್ಷ ಲಯನ್ ಉಮೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಲಯನ್ ದೇವದಾಸ್, ಕಾರ್ಯದರ್ಶಿ ಲಯನ್ ಕಿರಣ್ ಶೆಟ್ಟಿ, ಪೂರ್ವ ಅಧ್ಯಕ್ಷ ಲಯನ್ ರಾಘವೇಂದ್ರ ಶೆಟ್ಟಿ, ಬಳಂಜ ಪೂರ್ವ ವಲಯ ಅಧ್ಯಕ್ಷ ಲಯನ್ ಪ್ರತೀಕ್ಷ ಹೆಬ್ಬಾರ್ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಸನ್ನಿ ಕೆಎಂ ರವರು ಉಪಸ್ಥಿತರಿದ್ದರು.

ಪ್ರಾಂಶುಪಾಲರು ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಉಜಿರೆ: ಅನುಗ್ರಹ ಪ.ಪೂ. ಕಾಲೇಜಿಗೆ ಶೇ. 100 ಫಲಿತಾಂಶ

Suddi Udaya

ಬೆಳ್ತಂಗಡಿ ಶಾಂತಿಶ್ರೀ ಮಹಿಳಾ ಸಮಾಜ ವತಿಯಿಂದ ಯಕ್ಷಗಾನ ಶೈಲಿಯ ಕಾವ್ಯವಾಚನ- ಪ್ರವಚನ ವೈಭವದ ಶ್ರೀಜಿನ ಶಾಂತಿನಾಥ ಚರಿತೆ

Suddi Udaya

ಸರಕಾರದ ಎಮ್.ಎಸ್.ಐ.ಎಲ್ ಮದ್ಯದ ಅಂಗಡಿಗೆ ಜನಜಾಗೃತಿ ವೇದಿಕೆ, ಬಾರ್ಯ ಗ್ರಾ.ಪಂ. ಮತ್ತು ಗ್ರಾಮಸ್ಥರಿಂದ ತೀವ್ರ ವಿರೋಧ

Suddi Udaya

ರೆಖ್ಯ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು: 6 ಮಂದಿಗೆ ಗಂಭೀರ ಗಾಯ

Suddi Udaya

ಉಜಿರೆ : ಅಮರ ಕವಿ ವಾಲ್ಮೀಕಿ ವಿಶೇಷ ಉಪನ್ಯಾಸ

Suddi Udaya

ತೆಂಕುತಿಟ್ಟಿನ ಖ್ಯಾತ ಭಾಗವತ ಮಹೇಶ್ ಕನ್ಯಾಡಿಯವರ ಮೊಬೈಲ್ ಕಳವು

Suddi Udaya
error: Content is protected !!