28.6 C
ಪುತ್ತೂರು, ಬೆಳ್ತಂಗಡಿ
March 31, 2025
ಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಯಕ್ಷಸಂಭ್ರಮ ಉದ್ಘಾಟನೆ: ನಾಲ್ವರು ಯಕ್ಷಗಾನ ತರಬೇತಿ ಗುರುಗಳಿಗೆ ಗೌರವಾರ್ಪಣೆ: 8 ಶಾಲೆಗಳು 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ

ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ಇದರ ವತಿಯಿಂದ ಯಕ್ಷಸಂಭ್ರಮ – 2024 ಕಾರ್ಯಕ್ರಮವು ಡಿ.14 ರಂದು ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ಯಕ್ಷಧ್ರುವ ಪಟ್ಲ ಘಟಕ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ,ಮೋಹನ್ ಕುಮಾರ್ ಉದ್ಯಮಿಗಳು, ಶ್ರೀ ಲಕ್ಷ್ಮೀ ಗ್ರೂಪ್ಸ್ ಉಜಿರೆ , ಮಂಗಳೂರು ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕರು ವಾಸುದೇವ ಐತಾಳ್ ಪಣಂಬೂರು, ಯಕ್ಷ ಧ್ರುವ ಬೆಳ್ತಂಗಡಿ ಘಟಕದ ಸ್ಥಾಪಕ ಅಧ್ಯಕ್ಷ ಬಿ.ಭುಜಬಲಿ, ಸಮಿತಿ ಗೌರವಾಧ್ಯಕ್ಷ ಜಯರಾಮ ಶೆಟ್ಟಿ ನವಶಕ್ತಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಯಕ್ಷಗಾನ ತರಬೇತಿ ಗುರುಗಳಾದ ಈಶ್ವರ ಪ್ರಸಾದ್ ನಿಡ್ಲೆ, ದೇವಿಪ್ರಸಾದ್ ಶಕ್ತಿನಗರ, ಅರುಣ್ ಕುಮಾರ್ ಧಮ೯ಸ್ಥಳ, ನರೇಂದ್ರ ಕುಮಾರ್ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಹಿತ ಎಂಬ ಯಕ್ಷ ವಿದ್ಯಾರ್ಥಿ ಪಟ್ಲ ಸತೀಶ ಶೆಟ್ಟಿಯವರ ಪೆನ್ಸಿಲ್ ರೇಖಾಚಿತ್ರ ಹಸ್ತಾಂತರಿಸಿದರು.


ವೇದಿಕೆಯಲ್ಲಿ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ , ರಘುರಾಮ ಶೆಟ್ಟಿ ಸಾಧನ ಉಜಿರೆ, ಕಾರ್ಯದರ್ಶಿ ಶಿತಿಕಂಠ ಭಟ್ ಉಜಿರೆ , ಸಂಚಾಲಕರು ಕಿರಣ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಆದಶ್೯ ಜೈನ್ ಉಪಸ್ಥಿತರಿದ್ದರು.


ಸಿಂಚನ ಮತ್ತು ಬಳಗ ಪ್ರಾಥ೯ನೆ ಬಳಿಕ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಸ್ವಾಗತಿಸಿದರು. ಉಪನ್ಯಾಸಕ ಡಾ.ಮಹೇಶ್ ಕಾಯ೯ಕ್ರಮ ನಿರೂಪಿಸಿದರು.


ಈ ವೇಳೆ ಶ್ರೀರಾಮ ಪ್ರೌಢಶಾಲೆ ಪಟ್ಟೂರು, ಸರಕಾರಿ ಪ್ರೌಢಶಾಲೆ ಕಲ್ಮಂಜ, ಸರಕಾರಿ ಪ್ರೌಢಶಾಲೆ ನಿಡ್ಲೆ, ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ, ವಾಣಿ ಶಿಕ್ಷಣ ಸಂಸ್ಥೆ ಹಳೆಕೋಟೆ ಬೆಳ್ತಂಗಡಿ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅನಾರು ಪಟ್ರಮೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಮುಂತಾದ ಶಾಲಾ ವಿದ್ಯಾರ್ಥಿಗಳಿಂದ ಸುಮಾರು 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ ನಡೆಯಿತು.

ಸಂಜೆ ಗಂಟೆ 7.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಯಕ್ಷಗಾನ ಕಲಾವಿದರು ಅರುವ ಕೊರಗಪ್ಪ ಶೆಟ್ಟಿರವರಿಗೆ ಯಕ್ಷ ಸಂಭ್ರಮ 2024 ಪ್ರಶಸ್ತಿ ಪ್ರಧಾನ ಹಾಗೂ ಸಾಧಕರಾದ ಡಾ| ವೇಣುಗೋಪಾಲ ಶರ್ಮ ಹಿರಿಯ ವೈದ್ಯರು ಗುರುವಾಯನಕೆರೆ, ಡಾ| ಕೆ.ಜಿ. ಪಣಿಕರ್ ಹಿರಿಯ ವೈದ್ಯರು, ಧನ್ವಂತರಿ ಆರ್ಯುವೇದ ಕ್ಲಿನಿಕ್ ಬೆಳ್ತಂಗಡಿ, ನಿಡ್ಲೆ ಆಗ್ರೀಲಿಫ್ ಪ್ರೈ. ಲಿ. ಸಂಸ್ಥಾಪಕರು ಅವಿನಾಶ್ ರಾವ್ , ಸಹಸ್ಥಾಪಕರು ಅತಿಶಯ ಜೈನ್ ಗೌರವ ಸನ್ಮಾನ ನಡೆಯಲಿದೆ. ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮೀಜಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ “ಶ್ರೀದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Related posts

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯಾಗಿ ವಿಜಯಾ ಆರಂಬೋಡಿ, ಕಾರ್ಯದರ್ಶಿಯಾಗಿ ಅಮಿತಾ ಕುಶಾಲಪ್ಪ ಗೌಡ ನೇಮಕ

Suddi Udaya

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಉಜಿರೆ ಉದ್ಯಮಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ

Suddi Udaya

ಭಾ.ಜ.ಪಾ. ಹಿರಿಯ ನಾಗರೀಕ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ನೇಮಕ

Suddi Udaya

ಪಡ್ಡಂದಡ್ಕದಲ್ಲಿ ಶ್ರೀ ಮಂಜುನಾಥೇಶ್ವರ ಕುಣಿತ ಭಜನಾ ಮಂಡಳಿಗೆ ಚಾಲನೆ

Suddi Udaya

ಜೆ ಸಿ ಐ ಕೊಕ್ಕಡ ಕಪಿಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಳಂಜ ವೈಭವದ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!