ಉಜಿರೆ: ಬೆಳಾಲು ನಿನ್ನಿಕಲ್ಲು ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಡಿ.16 ರಂದು ನಡೆದಿದೆ.
ಮೃತ ವ್ಯಕ್ತಿ ಬೆಳ್ತಂಗಡಿ ಉಗ್ರಾಣಿಬೆಟ್ಟು ನಿವಾಸಿ ಸುಂದರ ಆಚಾರ್ಯ(79ವ) ಮೃತ ದುರ್ದೈವಿ.
ಡಿ.15 ರಂದು ಉಜಿರೆಯಿಂದ ಬೆಳಾಲು ಕಡೆಗೆ ಹೋಗುತ್ತಿದ್ದ ದ್ವಿಚಕ್ರ ಹಾಗೂ ಬೆಳಾಲು ಕಡೆಯಿಂದ ಉಜಿರೆಯತ್ತ ಬರುತ್ತಿದ್ದ ಕಾರು ನಡುವೆ ಮಾಚಾರು ಸಮೀಪದ ನಿನ್ನಿಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದ್ದು ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.
ಮೃತರು ಪತ್ನಿ ಭವಾನಿ, ಇಬ್ಬರು ಪುತ್ರರಾದ ಜಗದೀಶ್, ಪ್ರಕಾಶ್, ಇಬ್ಬರು ಪುತ್ರಿಯರಾದ ಉಷಾ, ವಾಗಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.