23.2 C
ಪುತ್ತೂರು, ಬೆಳ್ತಂಗಡಿ
December 19, 2024
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗ್ರಾಮೀಣ ಸರಕಾರಿ ಪ್ರೌಢಶಾಲೆಯಲ್ಲಿ ಹೀಗೊಂದು ವಿನೂತನ ಶೌಚಾಲಯ

ಬೆಳ್ತಂಗಡಿ: “ನೈರ್ಮಲ್ಯದೆಡೆಗೆ ನಮ್ಮ ನಡಿಗೆ” ಎಂಬುವುದು ಜಾಗತಿಕ ವೇದವಾಕ್ಯ. ಮನುಷ್ಯನ ಉದರ ತುಂಬಿಸುವುದು ಎಷ್ಟು ಮುಖ್ಯವೋ ದೈಹಿಕ ಭಾದೆಯ ವಿಲೇವಾರಿಯೂ ಅಷ್ಟೇ ಮುಖ್ಯ. ಶೌಚಾಲಯಗಳು ನೈರ್ಮಲ್ಯ ಪರಿಸರದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.


ಶೌಚದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದಾಗ ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯ. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಸುಂದರವಾದ ಶೌಚಾಲಯ ಲಭ್ಯಗೊಳಿಸಬೇಕಾದುದು ನಮ್ಮ ಆದ್ಯ ಕರ್ತವ್ಯವೂ ಹೌದು.


ಮಾದರಿ ಶೌಚಾಲಯ:
ಶಾಲೆಗಳು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ನೀಡುವ ಮಂದಿರಗಳು ಎಂಬ ಮಾತಿನಲ್ಲಿ ಸಂಶಯವಿಲ್ಲ. ಸ್ವಚ್ಛತೆಯ ಶಿಕ್ಷಣ ಶಾಲೆಯಲ್ಲಿ ಗಟ್ಟಿಗೊಂಡಾಗ ಅದು ವ್ಯಕ್ತಿಯ ಬದುಕಿನ ಅವಿಭಾಜ್ಯ ಚಟುವಟಿಕೆಯಾಗಿ ರೂಪುಗೊಳ್ಳುತ್ತದೆ. ಆದ್ದರಿಂದಲೇ ಪ್ರತಿಯೊಂದು ಶಾಲೆಯೂ ಉತ್ತಮ ಶೌಚಾಲಯದ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ ಮಹತ್ವದ ಹೆಜ್ಜೆ ಇಟ್ಟಿದೆ ಎಂದರೆ ತಪ್ಪಾಗದು. ಸರಕಾರಿ ಶಾಲೆಯೊಂದು ರಾಜ್ಯ ಹಾಗೂ ರಾಷ್ಟ್ರಕ್ಕೇ ಮಾದರಿಯಾದ ಶೌಚಾಲಯವನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ರೋಟರಿ ಕ್ಲಬ್ ಸಹಯೋಗ:
“ಕ್ಯಾನ್ ಫಿನ್ ಹೋಂಮ್ಸ್” ಎಂಬ ಖಾಸಗಿ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಶೌಚಾಲಯ ನಿರ್ಮಾಣಕ್ಕೆ ಬದ್ಧತೆ ತೋರಿದಾಗ ಸರಕಾರಿ ಪ್ರೌಢಶಾಲೆ ಕಾಯರ್ತಡ್ಕದತ್ತ ಅವರಿಗೆ ದಾರಿ ತೋರಿಸಿದ್ದು ರೋಟರಿ ಸಂಸ್ಥೆ. ನೂರಾರು ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥತೆಯಿಂದ ನಡೆಸಿಕೊಂಡು ಬರುತ್ತಿರುವ ರೋಟರಿ ಸಂಸ್ಥೆಗಳ ಸೇವೆ ಶ್ಲಾಘನೀಯ. ರೋಟರಿ ಇಂದಿರಾ ನಗರ ಬೆಂಗಳೂರು ಹಾಗೂ ರೋಟರಿ ಬೆಳ್ತಂಗಡಿ ಇವರ ಸಹಯೋಗದಲ್ಲಿ ಇಂದು ಅದ್ಭುತವಾದ ಶೌಚಾಲಯ ಸರಕಾರಿ ಪ್ರೌಢಶಾಲೆ ಕಾಯರ್ತಡ್ಕದಲ್ಲಿ ಎದ್ದು ನಿಂತಿದೆ.


ಶೌಚಾಲಯದಲ್ಲಿ ವಿನೂತನ ಕಲ್ಪನೆ:
ಶೌಚಾಲಯದ ಮುಂಭಾಗ ಹುಲ್ಲು ಹಾಸಿದ್ದು ವಿಶೇಷವಾದ ಕಲ್ಪನೆಯಾಗಿದೆ. ಕುಂಡಗಳಲ್ಲಿ ಗಿಡಗಳನ್ನಿಟ್ಟು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಗೋಡೆಯ ಬಣ್ಣ ತುಂಬಾನೇ ಆಕರ್ಷಕವಾಗಿದೆ. ಕಡು ಕೆಂಬಣ್ಣ ಬಹಳ ಸುಂದರವಾಗಿ ಗೋಚರಿಸುತ್ತಿದೆ. ಇನ್ನು ಒಳಭಾಗ ಇನ್ನೂ ಅಚ್ಚರಿಯನ್ನು ಮೂಡಿಸುತ್ತದೆ. ಗೋಡೆಯ ತುಂಬೆಲ್ಲಾ ಘೋಷಣೆಗಳುಳ್ಳ ಪೋಸ್ಟರ್‌ಗಳ ಪ್ರದರ್ಶನ ಮಾಡಿರುವುದು ಒಂದು ವಿನೂತನ ಕಲ್ಪನೆಯಾಗಿದೆ. ಅದರಲ್ಲೂ ಪೋಸ್ಟರ್‌ಗಳಲ್ಲಿ ಶಾಲೆಯ ವಿದ್ಯಾರ್ಥಿಗಳನ್ನೇ ಬಳಸಿರುವುದು ಪೋಷಕರಲ್ಲಿ ಸಂತಸ ಮೂಡಿಸಿದೆ. ಹತ್ತು ಕಂಪಾರ್ಟ್ಮೆಂಟ್ ಹೊಂದಿರುವ ಈ ಶೌಚಾಲಯದ ಬಾಗಿಲುಗಳು ಮನಮೋಹಕ ಚಿತ್ರಗಳಿಂದ ಆಕರ್ಷಕ ವಾಗಿ ಕಾಣಿಸುತ್ತಿದೆ. ಪ್ರತಿಯೊಂದು ಕಂಪಾರ್ಟ್ಮೆಂಟ್‌ಗೂ ಸಂಖ್ಯೆಗಳನ್ನು ಕೊಡಲಾಗಿದೆ. ವಿಶಾಲವಾದ ಸ್ಥಳವಕಾಶವನ್ನು ಮಧ್ಯ ಭಾಗದಲ್ಲಿ ಕಲ್ಪಿಸಿದ್ದು ವಿಶೇಷವಾಗಿದೆ. ಬೃಹತ್ ಕನ್ನಡಿಯನ್ನು ಜೋಡಿಸಲಾಗಿದ್ದು ವಿದ್ಯಾರ್ಥಿಗಳ ಮನಸ್ಸನ್ನು ಸೂರೆಗೊ ಳ್ಳುತ್ತಿದೆ. ಶೌಚಾಲಯ ನಿರ್ವಹಣೆಗೆ ಬೇಕಿರುವ ಎಲ್ಲಾ ಪರಿಕರಗಳು ಲಭ್ಯವಿರುವಂತೆ ಮಾಡಲಾಗಿದೆ.

ಪ್ರತಿಯೊಬ್ಬರೂ ನೋಡಲೇಬೇಕಾದ ಮಟ್ಟಿಗೆ ಈ ಶೌಚಾಲಯ ನಿರ್ಮಾಣಗೊಂಡಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ಇವರು ಶಾಲೆಯ ಮುಖ್ಯ ಶಿಕ್ಷಕ ಹುದ್ದೆ ಸ್ವೀಕರಿಸಿ ತನ್ನ ಮೊದಲ ಆದ್ಯತೆ ಶೌಚಾಲಯ ನಿರ್ಮಾಣಕ್ಕೆ ನೀಡಿರುವುದು ಎಲ್ಲರ ಪ್ರಸಂಶೆಗೆ ಪಾತ್ರವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಶೌಚಾಲಯ ಅಧಿಕೃತ ಉದ್ಘಾಟನೆ ಕಾಣಲಿದೆ.

Related posts

ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಮುಂಭಾಗದಲ್ಲಿ ಧ್ವಜಾರೋಹಣ

Suddi Udaya

ನಿಡ್ಲೆ ಗ್ರಾ.ಪಂ. ನಲ್ಲಿ ರೋಜ್ ಗಾರ್ ದಿನಾಚರಣೆ

Suddi Udaya

ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯಕ್ಕಾಗಿ ಬೆಳ್ತಂಗಡಿ ಬಿಜೆಪಿ ಮಹಿಳಾ ಮೋರ್ಚಾದಿಂದ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಚಾಮಾ೯ಡಿ : ಮರಳು ಸಾಗಾಟದ ಲಾರಿ ವಶ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಹಿಳಾ ಮತ್ತು ಜೂನಿಯರ್ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಮಿತ್ತಬಾಗಿಲು ಗ್ರಾಮ ಸಭೆ: ಆಶ್ರಯ ಯೋಜನೆಯ ಮನೆ ಮಂಜೂರಾತಿಯಲ್ಲಿ ಪಾರದರ್ಶಕತೆ ಇರಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!