September 6, 2026
ನಿಧನ

ಶಿಶಿಲ: ಪ್ರಸಿದ್ಧ ನಾಟಿ ವೈದ್ಯ ಉಮೇಶ್ ಪಂಡಿತ್ ದೇನೋಡಿ ಅನಾರೋಗ್ಯದಿಂದ ನಿಧನ

ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ದೇನೋಡಿಯ ಪ್ರಸಿದ್ದ ನಾಟಿ ವೈದ್ಯರಾದ ಉಮೇಶ್ ಪಂಡಿತ್ (62ವ)ಅವರು ಡಿ.17 ರಂದು ನಿಧನರಾಗಿದ್ದಾರೆ.

ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳ್ತಂಗಡಿ, ಪುತ್ತೂರು, ಕಡಬ ತಾಲ್ಲೂಕಿನ ಪಟ್ಟಣಗಳಲ್ಲಿ ವಾರವಾರ ಶಿಬಿರ ನಡೆಸಿ ಹಳ್ಳಿ ಮದ್ದಿನ ಮುಖಾಂತರ ಅನೇಕ ಜನರ ಖಾಯಿಲೆಗಳನ್ನು ಗುಣಪಡಿಸಿ, ಅನೇಕ ಅಭಿಮಾನಿಗಳನ್ನು ಹೊಂದಿರುತ್ತಾರೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪತ್ತಿರುತ್ತಾರೆ.

ಇಂದು ಬೆಳಿಗ್ಗೆ 11 ಗಂಟೆಯವರೆಗೆ ಶಿಶಿಲ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇವರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಪುತ್ತಿಲ: ಆಟೋ ಚಾಲಕ ದೀಕ್ಷಿತ್ ಬಿ. ಹೃದಯಾಘಾತದಿಂದ ನಿಧನ

Suddi Udaya

ಶಿಶಿಲ : 9 ವರ್ಷದ ಬಾಲಕ ಅಶ್ವಿನ್ ನಿಧನ

Suddi Udaya

ಕಡಿರುದ್ಯಾವರ ಕಾನರ್ಪ ಪೆಲತ್ತಡಿ ನಿವಾಸಿ ನೀಲಯ್ಯ ಗೌಡ ನಿಧನ

Suddi Udaya

ನಿವೃತ್ತ ಉಪತಹಶೀಲ್ದಾರ್, ಪ್ರಗತಿಪರ ಕೃಷಿಕ, ನಾಳ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗುಂಡೂರಾವ್ ವಿಧಿವಶ

Suddi Udaya

ಸುರತ್ಕಲ್ ಮುಕ್ಕದಲ್ಲಿ ಕಾರು ಡಿಕ್ಕಿ: ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿ ಜೀವನ್ ಕುಮಾರ್ ಸಾವು

Suddi Udaya

ಮಚ್ಚಿನ : ಹಿರಿಯ ದೈವ ನರ್ತಕ ಬೊಮ್ಮಣ್ಣ ನಿಧನ

Suddi Udaya
error: Content is protected !!