23.3 C
ಪುತ್ತೂರು, ಬೆಳ್ತಂಗಡಿ
April 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜ.4: ಮರೋಡಿ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ದಶಮಾನೋತ್ಸವ, ಶನೀಶ್ವರ ಪೂಜೆ

ಮರೋಡಿ: ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಮರೋಡಿ ಇದರ ದಶಮಾನೋತ್ಸವ ಪ್ರಯುಕ್ತ ಸಾರ್ವಜನಿಕ ಶನೀಶ್ವರ ಪೂಜೆ ಮತ್ತು ವಾರ್ಷಿಕೋತ್ಸವ ಸಮಾರಂಭ ಜ.4ರಂದು ಶನಿವಾರ ಸಂಜೆ 4ರಿಂದ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ರಾತ್ರಿ 8.30ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಉದ್ಘಾಟಿಸುವರು. ಉಜಿರೆ ಎಸ್‌.ಡಿ.ಎಂ ಕಾಲೇಜಿನ ಉಪನ್ಯಾಸಕ ಮಹಾವೀರ್‌ ಜೈನ್‌ ಇಚ್ಲಂಪಾಡಿ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಗೌರವಾಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್‌ ಚೌಟ, ಶಾಸಕ ಹರೀಶ್‌ ಪೂಂಜ, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್‌, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌, ಪ್ರಗತಿಪರ ಕೃಷಿಕ ವಿಜಯ ಆರಿಗ ನಿಡ್ಡಾಜೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಉಡುಪಿ ಜಿಲ್ಲಾ ಮುಖ್ಯಸ್ಥರು ರವೀಂದ್ರ ಅಂಚನ್‌, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಂಬಳ ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್‌, ಮುಂಬೈ ಭಾರತ್‌ ಬ್ಯಾಂಕ್‌ ನಿರ್ದೇಶಕ, ಉದ್ಯಮಿ ನಾರಾಯಣ ಸುವರ್ಣ ಕನರೊಟ್ಟು, ಪ್ರಗತಿಪರ ಕೃಷಿಕ ಶ್ರೀಧರ ಪೂಜಾರಿ ಭೂತಡ್ಕ ಭಾಗವಹಿಸಲಿದ್ದಾರೆ.

ಸಂಜೆ 4ಕ್ಕೆ ಕಲಶ ಪ್ರತಿಷ್ಠೆ, ಶ್ರೀ ಶನೀಶ್ವರ ಪೂಜೆ ಆರಂಭ, 6.30ಕ್ಕೆ ಶ್ರೀ ಉಮಾಮಹೇಶ್ವರ ದೇವರಿಗೆ ಶ್ರೀರಂಗಪೂಜೆ, 7.30ಕ್ಕೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ರಾತ್ರಿ 9ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಪ್ರಸಾದ ವಿತರಣೆ, 9.30ಕ್ಕೆ ನಮ್ಮ ಕಲಾವಿದೆರ್ ಬೆದ್ರ ಇವರಿಂದ ಆತೆ ಪನೊಡಾತೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

Related posts

ಅಗ್ರಿಲೀಫ್ ಸಂಸ್ಥೆಯಲ್ಲಿ ದೀಪಾವಳಿ ಸಂಭ್ರಮ

Suddi Udaya

ಅಯೋಧ್ಯೆ ಸಂಭ್ರಮಾಚರಣೆ ಸಂದರ್ಭ ಬಡಗಕಾರಂದೂರು ಗ್ರಾಮದ ಬಿಕ್ಕಿರ ನಿವಾಸಿಗಳಿಂದ ತಮ್ಮ ವಾಸಸ್ಥಳದ ಪರಿಸರವನ್ನು ರಾಮನಗರ ಎಂಬ ನಾಮಕರಣ

Suddi Udaya

ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ನೋಂದಣಿ ಕಛೇರಿ ಉದ್ಘಾಟನೆ

Suddi Udaya

ಅ.10: ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಮತ್ತು ಭಂಡಾರಿ ಸಮಾಜ ಸಂಘದ ಸಹಯೋಗದಲ್ಲಿ “ಕೆಸರ್‌ಡ್ ಒಂಜಿ ದಿನ”

Suddi Udaya

ಜ.28: ಇಂದಬೆಟ್ಟುವಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Suddi Udaya
error: Content is protected !!