34.4 C
ಪುತ್ತೂರು, ಬೆಳ್ತಂಗಡಿ
January 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಅಖಿಲ ಭಾರತ ಬ್ಯಾರಿ ಮಹಾಸಭಾ ಪ್ರತಿನಿಧಿ ಸಭೆಯ ಪೂರ್ವಭಾವಿ ಸಭೆ

ಬೆಳ್ತಂಗಡಿ: ಅಖಿಲ ಭಾರತ ಬ್ಯಾರಿ ಮಹಾ ಸಭಾ ದ.ಕ. ಮಂಗಳೂರು ವತಿಯಿಂದ ಜ.8 ರಂದು ಕುದ್ಮುಲ್ ರಂಗರಾವ್ ವೇದಿಕೆ ಪುರಭವನ ಮಂಗಳೂರಿನಲ್ಲಿ ನಡೆಯುವ ದ.ಕ.ಜಿಲ್ಲಾ ಪ್ರತಿನಿಧಿ ಸಭೆಯ ಪೂರ್ವಭಾವಿ ಸಭೆಯು ಜಮ್ಯೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಬಿ, ಶೇಕುಂಞ ಯವರು ಗುರುತು ಚೀಟಿ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿ ಹಾಗೂ ವೀಕ್ಷಕರಾಗಿ ಅ.ಭಾ.ಬ್ಯಾ.ಮಹಾಸಭದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಆಗಮಿಸಿ ಪ್ರತಿನಿಧಿ ಸಭೆಯ ಕಾರ್ಯರೂಪಗಳನ್ನು ತಿಳಿಸಿದರು.

ಅ.ಭಾ.ಬ್ಯಾ.ಮ. ಸಭೆಯ ಉಪಾಧ್ಯಕ್ಷ ಯು.ಕೆ. ಮೋನು ಪ್ರತಿನಿಧಿ ಸಭೆಯ ಜವಾಬ್ದಾರಿಗಳನ್ನು ತಿಳಿಸಿದರು. ಮಹಾ ಸಭಾದ ಸದಸ್ಯರುಗಳಾದ ಹುಸೈನ್, ಅಶ್ರಫ್ ಸುರತ್ಕಲ್, ಉಮರ್ ಮದ್ದಡ್ಕ, ಮಹಮ್ಮದ್ ಉಜಿರೆ, ಮುಸ್ತಫಾ ಜಿ.ಕೆ., ಬಿ.ಎಮ್.ಹನೀಫ್, ಅಕ್ಬರ್ ಬೆಳ್ತಂಗಡಿ, ಖಾಲಿದ್ ಪುಲಾಬೆ,ನವಾಝ್ ಕಟ್ಟೆ, ಬದ್ರುದ್ದೀನ್ ಕಾಜೂರು, ಉಮರ್ ಚಪ್ಪಲ್ ಮಾಟ್೯, ಉಮರ್ ಮಟನ್, ಹಸೈನಾರ್ ಬಿಬಿಎಸ್, ಉಮರ್ ಕುಂಞ ನಾಡ್ಜೆ ಸ್ವಾಗತಿಸಿ, ಅಬ್ಬೋನು ಮದ್ದಡ್ಕ ವಂದಿಸಿದರು.

Related posts

ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ ರವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

Suddi Udaya

ಶಿಶಿಲ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ

Suddi Udaya

ಕಳೆಂಜ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಸೋರುತಿದ್ದ ಮನೆಯ ಮೇಲ್ಛಾವಣಿಗೆ ಟಾರ್ಪಲ್ ಅಳವಡಿಕೆ

Suddi Udaya

ಬೆಳ್ತಂಗಡಿ : ನೆರಿಯದಲ್ಲಿ ಚಿರತೆ ದಾಳಿಯಿಂದ ಕಡವೆ ಸಾವು: ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ

Suddi Udaya

ಯುವವಾಹಿನಿ ಅಂತ‌ರ್ ಘಟಕ ಕುಣಿತ ಭಜನಾ ಸ್ಪರ್ಧೆ: ಬೆಳ್ತಂಗಡಿ ಯುವವಾಹಿನಿ ಘಟಕಕ್ಕೆ ದ್ವಿತೀಯ ಸ್ಥಾನ

Suddi Udaya
error: Content is protected !!