September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಚೆಕ್ ಅಮಾನ್ಯ ಪ್ರಕರಣ ಆರೋಪಿ ಖುಲಾಸೆ

ಬೆಳ್ತಂಗಡಿ: ಆರೋಪಿ ಕಡಿರುದ್ಯಾವರ ಗ್ರಾಮದ ಸುಂದರ ಗೌಡ ಇವರು ಉಜಿರೆ ಗ್ರಾಮದ ಪಣಿಕ್ಕಲ್ ಮನೆಯ ಚಂದ್ರಶೇಖರ ಇವರಿಂದ ಐದು ಲಕ್ಷದ ಮೂವತ್ತು ಸಾವಿರ ಪಡಕೊಂಡಿದ್ದು, ಸದ್ರಿ ಸಾಲವನ್ನು ಮರುಪಾವತಿ ಮಾಡಲು ರೂ .5,30,000 ಚೆಕ್ಕನ್ನು ಚಂದ್ರಶೇಖರ ಇವರಿಗೆ ನೀಡಿದ್ದು, ಸದ್ರಿ ಚೆಕ್ಕನ್ನು ನಗದೀಕರಣಕ್ಕಾಗಿ ಬ್ಯಾಂಕ್‌ಗೆ ಹಾಜರು ಪಡಿಸಿದಾಗ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದು ಹಿಂದಿರುಗಿಸಿರುತ್ತಾರೆ. ಬೆಳ್ತಂಗಡಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್. ಸಿ. ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿ, ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪ ಸಾಬೀತು ಆಗದೇ ಇರುವುದರಿಂದ ಆರೋಪಿಯನ್ನು ದೋಷ ಮುಕ್ತಗೊಳಿಸಿ ಜ. 04 ರಂದು ನ್ಯಾಯಾಧೀಶರಾದ ಮನು ಬಿ ಕೆ ಇವರು ತೀರ್ಪು ನೀಡಿರುತ್ತಾರೆ.

ಆರೋಪಿಯ ಪರವಾಗಿ ವಕೀಲರಾದ ಗಣೇಶ್ ಗೌಡ ಮತ್ತು ಪ್ರಶಾಂತ್ ಎಮ್ ವಾದಿಸಿದ್ದರು.

Related posts

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆ

Suddi Udaya

ಯುವವಾಹಿನಿ ವೇಣೂರು ಘಟಕದ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಪೂಜಾರಿ ಉದ್ದೋಟ್ಟು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ಯಶ್ ದಂಪತಿ ಭೇಟಿ: ದೇವರಿಗೆ ವಿಶೇಷ ಪೂಜೆ

Suddi Udaya

ಧರ್ಮಸ್ಥಳಕ್ಕೆ ಬಂದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

Suddi Udaya

ಹ್ಯಾಂಡ್‌ಬಾಲ್ ಪಂದ್ಯಾಟ : ಸಂತ ತೆರೇಸಾ ಪ್ರೌಢಶಾಲೆಯ ನಾಲ್ಕು ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya
error: Content is protected !!