ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಡ ಗ್ರಾ.ಪಂ. ಕಾರ್ಯದರ್ಶಿ ಕಿರಣ್‌ರಿಂದ ಮಾದರಿ ಕಾರ್ಯ: ಹಾರೆ ಹಿಡಿದು ಕೊಳವೆ ಬಾವಿಯ ಗುಂಡಿ ಮುಚ್ಚಿದ ಸರಕಾರಿ ನೌಕರ

ನಡ: ನೀರು ಸಿಗದ ಬೋರ್‌ವೆಲ್‌ಗಳನ್ನು (ಕೊಳವೆ ಬಾವಿ) ಮುಚ್ಚಾದೇ ಹಾಗೆಯೇ ಬಿಟ್ಟು ರಾಜ್ಯದಲ್ಲಿ ಹಲವು ಮಕ್ಕಳು ಪ್ರಾಣ ಕಳೆದುಕೊಂಡ ಘಟನೆಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದಕ್ಕೆ ಕಾರಣ ಬೋರ್‌ವೆಲ್ ಕೊರೆದ ನಂತರ ನೀರು ಸಿಗದಿದ್ದಾಗ ಮಾಲಕರು ಇದರ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸುತ್ತಿರುವುದೇ ಕಾರಣವಾಗಿದೆ.

ಇದೇ ರೀತಿಯ ಅಪಾಯಕಾರಿ ಕೊಳವೆ ಬಾವಿಯೊಂದು ನಡ ಶಾಲಾ ಬಳಿ ಇತ್ತು. ನಡ ಕಿರಿಯ ಪ್ರಾಥಮಿಕ ಶಾಲೆಯ ಬಳಿ 1 ತಿಂಗಳ ಹಿಂದೆ ಪಂಚಾಯತ್ ವತಿಯಿಂದ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ನೀರು ಸಿಗದೆ ಇದ್ದ ಕಾರಣ ಅದರ ಕೇಸಿಂಗ್ ಪೈಪ್ ಹೊರತೆಗೆದು ಗುಂಡಿಯನ್ನು ಮುಚ್ಚದೆ ಅದರ ಮೇಲೆ ಗೋಣಿಯನ್ನು ಹಾಕಿ ಕೊರೆದ ಕಂಪೆನಿಯವರು ಹಾಗೆ ಬಿಟ್ಟು ಹೋಗಿದ್ದರು. ಕೊರೆದ ಬೋರ್‌ವೆಲ್ ಗುಂಡಿಯನ್ನು ಹಾಗೆಯೇ ಬಿಟ್ಟಿರುವುದು ಕಂಡ ಒಬ್ಬ ಸರಕಾರಿ ನೌಕರ ತಾನೇ ಮುಂದೇ ಬಂದು ಹಾರೆ ಹಿಡಿದು ಗುಂಡಿ ಮುಚ್ಚಿದ ಘಟನೆ ನಡೆದಿದೆ.

ಬೋರ್‌ವೆಲ್ ಕೊರೆದು ಹಾಗೆಯೇ ಬಿಟ್ಟಿದ್ದ ಗುಂಡಿಯನ್ನು ಪಂಚಾಯತ್ ಕಾರ್ಯದರ್ಶಿ ಕಿರಣ್ ರವರು ತಾನೇ ಹಾರೆ ಹಿಡಿದು ಗುಂಡಿ ಮುಚ್ಚಿ, ಸಾರ್ವಜನಿಕರಿಗೆ ಆಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾರೆ. ಇಂತಹ ಒಬ್ಬ ಸರಕಾರಿ ನೌಕರ ನಮಗೆ ಕಾಣಸಿಗುವುದು ಬಹಳ ಅಪರೂಪ. ಅವರಲ್ಲಿ ಇರುವ ಈ ಗುಣ ಇತರರಿಗೆ ಪ್ರೇರಣೆಯಾಗಲಿ ಎಂದು ಗ್ರಾಮದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ನ.18: ಧರ್ಮಸ್ಥಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ‌.ವಸಂತ ಸಾಲಿಯಾನ್ ನಿವಾಸಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Suddi Udaya

ಕೊಕ್ಕಡ: ಕೆಎಸ್ಆರ್‌ಟಿಸಿ ಬಸ್–ಕಾರು ಮುಖಾಮುಖಿ ಡಿಕ್ಕಿ: ಮಹಿಳೆಗೆ ಗಾಯ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರ ಭಾರತಿ ಅಭ್ಯರ್ಥಿಗಳ ಆಯ್ಕೆ

Suddi Udaya

ಮಲವಂತಿಗೆ: ದಿಡುಪೆಯಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳ ದಾಳಿ : ಅಪಾರ ಕೃಷಿ ಹಾನಿ

Suddi Udaya

ಶಿಶಿಲ: ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ; ಚಂಡಿಕಾಹೋಮ

Suddi Udaya
error: Content is protected !!