18.9 C
ಪುತ್ತೂರು, ಬೆಳ್ತಂಗಡಿ
January 21, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂಟ್ವಾಳದ ಮಹಮ್ಮದ್ ರಫೀಕ್ ಕೊಲೆ ಪ್ರಕರಣ: ಆರೋಪಿ ಸಿದ್ದಿಕ್ ಗೆ ಜೀವಾವಧಿ ಶಿಕ್ಷೆ

ಬೆಳ್ತಂಗಡಿ : ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಮಹಮ್ಮದ್ ರಫೀಕ್ ಕೊಲೆ ಪ್ರಕರಣದಲ್ಲಿ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರಿನಲ್ಲಿ ವಿಚಾರಣೆ ನಡೆಸಿ ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಕೆಳಗಿನ ಕರ್ಲ ನಿವಾಸಿ ಇಬ್ರಾಹಿಂ ಮಗ ಸಿದ್ದೀಕ್‌ (34) ಎಂಬಾತನಿಗೆ ಜ.18 ರಂದು ಮಾನ್ಯ ನ್ಯಾಯಾಲಯವು 302 ಭಾದಂಸಂ ಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಹಾಗೂ 1,00,000 ರೂಪಾಯಿ ದಂಡ ಹಾಗೂ 201 ಭಾದಂಸಂ ಗೆ ಸಂಬಂಧಿಸಿದಂತೆ 7 ವರ್ಷ ಕಾರಾಗೃಹ ಹಾಗೂ 50,000 ರೂಪಾಯಿ ದಂಡ ವಿಧಿಸಿರುತ್ತದೆ.

ಪ್ರಕರಣದ ವಿವರ: ಆರೋಪಿ ಸಿದ್ದಿಕ್ ರೊಂದಿಗೆ ಕೊಲೆಯಾದ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಕರ್ಲ ನಿವಾಸಿ ಹಕೀಂ ಮಗ ಮಹಮ್ಮದ್ ರಫೀಕ್ (21) ಎಂಬವನು ಹಲವು ಬಾರಿ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಮಾಡುತ್ತಿದ್ದು , ಇದರಿಂದ ಬೇಸರದಲ್ಲಿದ್ದ ಆರೋಪಿ ಆತನಿಗೆ ಬುದ್ದಿ ಕಲಿಸಬೇಕೆಂದು ಸುಮಾರು ಸಮಯದಿಂದ ಕಾಯುತ್ತಿದ್ದು ದಿನಾಂಕ 12.09.2021 ರಂದು ಸಂಜೆ 6 ಗಂಟೆಗೆ ಮೃತ ರಫೀಕನು ಆಪಾದಿತರ ಮನೆಯ ಮುಂಭಾಗ ಶಟಲ್ ಆಟ ಆಡುತ್ತಿದ್ದ ಸಮಯ ಆತನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸಮೀಪದ ಗುಡ್ಡ ಪ್ರದೇಶಕ್ಕೆ ಸಿಗರೇಟು ಸೇದುವ ನೆಪದಲ್ಲಿ ಕರೆದುಕೊಂಡು ಹೋಗಿ ಆತನಲ್ಲಿ ಮಾತಾನಾಡುತ್ತಾ ಆರೋಪಿ ರಪೀಕ್ ನನ್ನು ಸಾಯಿಸುವ ಉದ್ದೇಶದಿಂದ ತಾನು ತಂದಿದ್ದ ಚಾಕುವಿನಿಂದ ಕುತ್ತಿಗೆಗೆ ಹಾಗೂ ಎದೆಗೆ ಮತ್ತು ಹೊಟ್ಟೆಗೆ ತಿವಿದು ರಕ್ರಸ್ರಾವವಾಗಿ ಬಿದ್ದವನನ್ನು ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಮುಖದ ಭಾಗಕ್ಕೆ ಹಾಕಿದ್ದುಈ ಸಮಯ ರಪೀಕ್ ನು ಅಲ್ಲಿಯೇ ಮೃತಪಟ್ಟಿದ್ದ. ಮೃತದೇಹವನ್ನು ಅಲ್ಲಿಯೇ ಬಿಟ್ಟರೆ ತೊಂದರೆಯಾಗಬಹುದೆಂದು ಅಲ್ಲಿಂದ ತನ್ನ ಗೆಳೆಯ ಪಯಜ್ ಗೆ ಕರೆ ಮಾಡಿ ಆತನ ಮನೆಗೆ ಹೋಗಿ ಕಾರನ್ನು ಪಡೆದುಕೊಂಡು ಕಾರಿನಲ್ಲಿ ಮೃತದೇಹವನ್ನು ಇಟ್ಟುಕೊಂಡು ವಗ್ಗ ಕಡೆ ಬರುತ್ತಾ ಕೊಡ್ಯಮಲೆ ಕಾಡುಪ್ರದೇಶದ ಮೋರಿಯಲ್ಲಿ ಹರಿಯುತ್ತಿರುವ ನೀರಿನ ತೋಡಿಗೆ ಬಿಸಾಡಿ ನಂತರ ಮನೆಗೆ ಬಂದು ಕಾರಿನಲ್ಲಿದ್ದ ರಕ್ತದ ಕಲೆಗಳನ್ನು ನೀರಿನಿಂದ ತೊಳೆದು ಬಟ್ಟೆ- ಬರೆಗಳನ್ನು ಬಕೆಟ್ ನೀರಿನಲ್ಲಿ ಹಾಕಿ ಸಾಕ್ಷ್ಯ ನಾಶ ಮಾಡಿರುವುದಾಗಿದೆ.

ಈ ಬಗ್ಗೆ ಆರೋಪಿ ಸಿದ್ದೀಕ್‌ ಎಂಬಾತನು ದಿನಾಂಕ 13-09-2021 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಿ ಹೇಳಿಕೆಯನ್ನು ನೀಡಿದ್ದು, ಸದ್ರಿ ಹೇಳಿಕೆಯ ಆಧಾರದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣಾ ಅ.ಕ್ರ 60/2021 ಕಲಂ 302, 201 ರಂತೆ ಪ್ರಕರಣ ದಾಖಲಿಸಿದ ಬಳಿಕ ತನಿಖೆಯನ್ನು ನಡೆಸಿದ ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶಿವಕುಮಾರ್‌ ಬಿ ರವರು ಆರೋಪಿ ಸಿದ್ದೀಕ್‌ ನನ್ನು ಪ್ರಕರಣಕ್ಕೆ ಸಂಬಂದಿಸಿದಂತೆ ವಿಚಾರಣೆ ನಡೆಸಿ ಆರೋಪಿತನು ತಿಳಿಸಿದಂತೆ ಮೃತದೇಹ ಬಿಸಾಡಿದ ಸ್ಥಳಕ್ಕೆ ತೆರಳಿ ಮೃತದೇಹವನ್ನು ಪತ್ತೆ ಮಾಡಿ, ಶವ ಪಂಚನಾಮೆ ನಡೆಸಿ ಬಳಿಕ ಆರೋಪಿತನು ತಿಳಿಸಿದಂತೆ ಕೃತ್ಯಕ್ಕೆ ಬಳಸಿ ಚೂರಿ, ಕಲ್ಲನ್ನು ಸ್ವಾಧೀನಪಡಿಸಿಕೊಂಡು, ಪ್ರಕರಣಕ್ಕೆ ಸಂಬಂದಿಸಿದ ಪೂರಕ ಸಾಕ್ಷಿಗಳನ್ನು ಸಂಗ್ರಹಿಸಿ ಮಾನ್ಯ ನ್ಯಾಯಾಲಯಕ್ಕೆ ಆರೋಪಿತನ ವಿರುದ್ದ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಪ್ರಕರಣದ ತನಿಖೆ: ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಒಟ್ಟು 21 ಸಾಕ್ಷಿಧಾರರನ್ನು ವಿಚಾರಣೆ ನಡೆಸಿದ್ದು, ಪ್ರಕರಣದ ಸಂಪೂರ್ಣ ತನಿಖೆಯನ್ನು ಶಿವಕುಮಾರ್‌ ಬಿ ವೃತ್ತ ನಿರೀಕ್ಷಕರು ಬೆಳ್ತಂಗಡಿ ಗ್ರಾಮಾಂತರ ವೃತ್ತ (ಪ್ರಸ್ತುತ ನಿರೀಕ್ಷಕರು ಬಂಟ್ವಾಳ ಗ್ರಾಮಾಂತರ ಠಾಣೆ) ರವರು ನಡೆಸಿದ್ದು, ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ವಿಜಯ್‌ ಕುಮಾರ್‌ ರೈ ಬೆಳ್ತಂಗಡಿ ಗ್ರಾಮಾಂತರ ವೃತ್ತ ಕಛೇರಿ, ಹಾಗೂ ಕುಟ್ಟಿ ಮೇರ ಪಿಎಸ್‌ಐ (ತನಿಖೆ) ಪುಂಜಾಲಕಟ್ಟೆ ಪೊಲೀಸ್ ಠಾಣೆ (ಪಸ್ತುತ ಪಿಎಸ್‌ಐ ಪುತ್ತೂರು ಸಂಚಾರ ಠಾಣೆ) ರವರು ಸಹಕರಿಸಿರುತ್ತಾರೆ.

ಅಧಿಕಾರಿಗಳ ಕರ್ತವ್ಯ ನಿರ್ವಹಣೆ: ಈ ಪ್ರಕರಣವನ್ನು ನಾಗೇಶ್‌ ಕದ್ರಿ ವೃತ್ತ ನಿರೀಕ್ಷಕರು ಬೆಳ್ತಂಗಡಿ ಗ್ರಾಮಾಂತರ ವೃತ್ತ ರವರು ಮಾನಿಟರಿಂಗ್‌ ಮಾಡುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಮನ್ಸ್‌ ಗಳನ್ನು ನವೀನ್‌, ದುಂಡಪ್ಪ, ರಾಹುಲ್, ಮೋಹನ್‌, ಪ್ರಸಾದ್‌ ನಿರ್ವಹಿಸಿ ಸಾಕ್ಷಿದಾರರನ್ನು ಸೆಷನ್ಸ್‌ ನ್ಯಾಯಾಲಯದ ಕರ್ತವ್ಯವನ್ನು ಮಪಿಸಿ 1007 ನೇ ಸಫಿನಾ ರವರು ಸರಕಾರಿ ಅಭಿಯೋಜಕರ ಮುಂದೆ ಹಾಜರುಪಡಿಸಿ, ಪ್ರಕರಣದಲ್ಲಿ ಪೂರಕ ಸಾಕ್ಷಿ ನುಡಿಯುವ ಬಗ್ಗೆ ಸಹಕರಿಸಿದ್ದು, ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್‌ ನಾಯಕ್‌, ಮೋತಿಲಾಲ್‌ ಚೌದರಿ ರವರು ವಾದಿಸಿರುತ್ತಾರೆ.

Related posts

ಉಜಿರೆಯ ಸ್ಮಾರ್ಟ್ ಮೊಬೈಲ್ ಕೇರ್ ನಲ್ಲಿ ಕಳ್ಳತನ: ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Suddi Udaya

ಗೃಹಲಕ್ಷ್ಮಿ ಯೋಜನೆಯಲ್ಲಿ ತಾಂತ್ರಿಕ ತೊಡಕು, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಂಪೂರ್ಣವಾಗಿ ದೊರೆಯಲು ಕ್ರಮ ವಹಿಸುವಂತೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ರಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಪತ್ರ ಬರೆದು ಒತ್ತಾಯ

Suddi Udaya

ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಬೆಳ್ತಂಗಡಿ: ಶೇಂದಿ ತೆಗೆಯುವ ವೇಳೆ ವ್ಯಕ್ತಿ ಮರದಿಂದ ಬಿದ್ದು ಸಾವು

Suddi Udaya

ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪೊಲೀಸರು: ಆರೋಪಿ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ ಮತ್ತು ಕಳವುಗೈದ ನಗದು ವಶ

Suddi Udaya

ಪಟ್ರಮೆ ಪಟ್ಟೂರಿನ ನೆರೆಕರೆಯ ಇಬ್ಬರು ಯುವತಿಯರು ಒಂದೇ ದಿನ ಮೃತ್ಯು: ಹೊಟ್ಟೆನೋವಿನಿಂದ ಅಸ್ವಸ್ಥಗೊಂಡಿದ್ದ ರಕ್ಷಿತಾ ಹಾಗೂ ಲಾವಣ್ಯ

Suddi Udaya
error: Content is protected !!