ಮುಂಡಾಜೆ: ಗ್ರಾಮ ಪಂಚಾಯತ್ ಮುಂಡಾಜೆ, ಹಾಗೂ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ ವಿಶೇಷ ಚೇತನ ವಾರ್ಷಿಕ ದಿನಾಚರಣೆ ಅಂಗವಾಗಿ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗದ ವತಿಯಿಂದ ಸಮನ್ವಯ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಸೌಲಭ್ಯ ಸವಲತ್ತು ವಿತರಣೆ ಮಾಡಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಗಣೇಶ ಬಂಗೇರ ವಹಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸುಮಾ, ಅಶ್ವಿನಿ ಅರವಿಂದ ಹೆಬ್ಬಾರ್, ಪ್ರಹ್ಲಾದ್ ಫಡ್ಕೆ, ಸೆಬಾಸ್ಟಿಯನ್ ವಿ ಸಿ, ಅಬೂಬಕ್ಕರ್ ಶಿರ್ತಾಡಿ ಉಪಸ್ಥಿತರಿದ್ದರು.
ವಿಕಲಚೇತನರ ಪುನರವಸತಿ ಕಾರ್ಯ ವಿಭಾಗದ ಜೋಸೆಫ್ ಇಂದಬೆಟ್ಟು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಮುಂಡಾಜೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿರರು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾಹಿತಿಯನ್ನು ನಡೆಸಿ ಕೊಟ್ಟರು, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಜೊತೆಗಿದ್ದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಕಲ ಚೇತನ ಫಲಾನುಭವಿ ವಿದ್ಯಾರ್ಥಿಯರಿಗೆ ಗ್ರಾಮ ಪಂಚಾಯಿತಿ 5%ರ, ಅನುದಾನ ಶಿಕ್ಷಣಕ್ಕೆ ಸಹಾಯದ ಉದ್ದೇಶ ಚೆಕ್ ವಿತರಣೆ ಮಾಡಲಾಯಿತು. ಭಾಗವಹಿಸಿದ ಎಲ್ಲರಿಗೂ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಕಲ ಚೇತನರಿಗೆ ಮತ್ತು ತಂದೆ ತಾಯಿ ಮರಣದ ಮಕ್ಕಳಿಗೆ ಸೆಬಾಸ್ಟಿಯನ್ ಮುಂಡಾಜೆ ರವರು ನೀಡಲಾದ ಸ್ಕೂಲ್ ಬ್ಯಾಗ್, ಬಟ್ಟೆ, ವಸ್ತುಗಳನ್ನು ವಿತರಿಸಲಾಯಿತು. 72ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಸ್ವಾಗತಿಸಿ, ವಂದಿಸಿದರು. ಮುಂಡಾಜೆ ಗ್ರಾಮೀಣ ಪುನರ್ ವಸತಿ ಕಾರ್ಯ ವಿಭಾಗದ ವಿ ಆರ್ ಡಬ್ಲ್ಯೂ ಮಜೀದ್ ನಿಡಿಗಲ್ ಪ್ರಾಸ್ತಾವಿಕ ವರದಿ ಮಂಡಿಸಿದರು,
ಬೆಳ್ತಂಗಡಿ ತಾ.ಪಂ.ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.