September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ: ವಯೋವೃದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

ಅಳದಂಗಡಿ: ಬಡಗಕಾರಂದೂರು ಗ್ರಾಮದ ಅಳದಂಗಡಿ ಕೆದ್ದು ಪರಿಸರದಲ್ಲಿ ಬಾಡ ಎಂಬ ವಯೋವೃದ್ದರು ನಿರ್ಗತಿಕರಾಗಿ ಹಲವಾರು ವರ್ಷಗಳಿಂದ ಅಂಗಡಿ ಮುಂಗಟ್ಟುಗಳ ಮುಂಬಾಗ ,ಮರಗಳ ಕೆಳಗೆ ಹೀಗೆ ಅನಾಥವಾಗಿ ಇರುತ್ತಿದ್ದರು. ಯಾರಿಂದಲೂ ಕೈ ಚಾಚದೆ ,ಯಾರಿಗೂ ಕಿರಿಕಿರಿ ಉಂಟು ಮಾಡದೆ ಸ್ವಾಭಿಮಾನಿಯಾಗಿದ್ದು ಬಾಡಜ್ಜ ಎಂದು ಸಾರ್ವಜನಿಕರಿಂದ ಕರೆಯಲ್ಪಡುತ್ತಿದ್ದರು.

ಸ್ಥಳೀಯರು ನೀಡಿದ ಅನ್ನ ಆಹಾರ ಸೇವಿಸುತ್ತಿದ್ದರು. ಇತ್ತೀಚೆಗೆ ಕೆಲವು ದಿನಗಳಿಂದ ವಿಪರೀತವಾಗಿ ಚೈತನ್ಯ ಕಳೆದುಕೊಂಡಿದ್ದು ಇದನ್ನರಿತ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಅಳದಂಗಡಿ ಸಮಾಜ ಸೇವಾ ಸಂಘಟನೆಯು ಅಳದಂಗಡಿ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿ ವೇಣೂರು ಗುಂಡೂರಿಯ ಶ್ರೀ ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕುಲಾಲ್ ಕಾಟಿಪಳ್ಳ ಹಾಗೂ ವೇಣೂರಿನ ಪೋಲೀಸ್ ಠಾಣೆಗೂ ಕೂಡ ಮಾಹಿತಿ ನೀಡಿ ವೀರಕೇಸರಿ ಬಳಂಜ ಇವರ ಅಂಬುಲೆನ್ಸ್ ನಲ್ಲಿ ಕರೆದೊಯ್ದು ವೇಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಬಳಿಕ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ಸೇರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ದೇವದಾಸ್ ಸಾಲ್ಯಾನ್,ಅಳದಂಗಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಪೂರ್ಣಿಮ .ಜೆ , ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಆಚಾರ್ಯ ಮಿತ್ತರೋಡಿ, ಅಳದಂಗಡಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೊರಗಪ್ಪ , ಸಾಮಾಜಿಕ ಕಾರ್ಯಕರ್ತೆ ಹರಿಣಿ ಲಕ್ಷ್ಮಣ ಪೂಜಾರಿ ,ಕೀರ್ತನ್ ಇವರುಗಳು ಸಹಕರಿಸಿದರು.

ವಯೋವೃದ್ದರಾದ ಬಾಡಜ್ಜರವರ ಬಂಧುಬಳಗದವರ ಮಾಹಿತಿ ಇದ್ದಲ್ಲಿ ವೇಣೂರು ಪೋಲೀಸ್ ಠಾಣೆಗೆ ನೀಡಿ ಸಹಕರಿಸಬೇಕು ಎಂದು ಶ್ರೀಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ರವರು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ

Related posts

ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಖ್ಯಾತ ವಕೀಲ ರಾಜಶೇಖರ್ ಹಿಲಿಯಾರ್

Suddi Udaya

ಪರೀಕ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಬೆಳ್ತಂಗಡಿ ತಾಲೂಕಿನ ಹಲವು ಕಡೆ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭ

Suddi Udaya

ಹಿಂದೂ ಕಮಿಟಿ ಹರ್ಜ್ಲಿಯಾ ವತಿಯಿಂದ ಇಸ್ರೇಲ್ ನಲ್ಲಿ 9ನೇ ವರ್ಷದ ಅಯ್ಯಪ್ಪ ಸ್ವಾಮಿ ಪೂಜೋತ್ಸವ

Suddi Udaya

ಉಜಿರೆ: ಮರ ಬಿದ್ದು ಗಂಭೀರ ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!