ಬೆಳ್ತಂಗಡಿ: ಕಳೆದ 7 ವರ್ಷಗಳಿಂದ ಚಿನ್ನ ಆಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಪೃಥ್ವಿ ಜುವೆಲ್ಸ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ಜ.25 ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಉದಯ್ ಕುಮಾರ್ ಲಾಯಿಲ, ಸಮೂಹ ಸಂಪನ್ಮೂಲ ವ್ಯಕ್ತಿ ಗುರುವಾಯನಕೆರೆ ಕ್ಲಸ್ಟರ್ ರಾಜೇಶ್, ಸ್ಪರ್ಧಾ ತೀರ್ಪುಗಾರರಾಗಿ ಗಣೇಶ್ ಆಚಾರ್ಯ ಗುಂಪಲಾಜೆ ಉಪಸ್ಥಿತರಿದ್ದರು.
ತಾಲೂಕಿನ 18 ಸರಕಾರಿ ಶಾಲೆಗಳಲ್ಲಿ 600 ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅದರಲ್ಲಿ ಆಯ್ದ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ನಂತರ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
1-5ನೇ ತರಗತಿ ವಿಜೇತರು: ಪ್ರಥಮ – ಗೌತಮಿ ಮೇಲಂತಬೆಟ್ಟು ಶಾಲೆ, ದ್ವಿತೀಯ -ಅನ್ವಿತಾ ಹಳೆಪೇಟೆ ಶಾಲೆ, ತೃತೀಯ- ಮನೀಶ್ ಹುಣ್ಸೆಕಟ್ಟೆ.
6-7ನೇ ತರಗತಿ ವಿಜೇತರು: ಪ್ರಥಮ – ಸಮೀಕ್ಷಾ ಇಂದಬೆಟ್ಟು ಶಾಲೆ, ದ್ವಿತೀಯ – ಸಂನಾಝ್ – ಹಳೆಪೇಟೆ ಶಾಲೆ,
ತೃತೀಯ – ಜಾನ್ವಿ ಮಾದರಿ ಶಾಲೆ ಬೆಳ್ತಂಗಡಿ,
ಬೆಳ್ತಂಗಡಿ ಶಾಖಾ ಪ್ರಬಂಧಕ ಅಶೋಕ್ ಬಂಗೇರ ಪ್ರಸ್ತಾವಿಸಿ ಸ್ವಾಗತಿಸಿದರು. ರೋಹಿತಾಕ್ಷ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಪೃಥ್ವಿ ಸಂಸ್ಥೆಯ ಸಿಬ್ಬಂದಿಗಳು, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಪೋಷಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.