April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನ ಮಾರಿಗುಡಿ ಶ್ರೀ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ದೊಂಪದ ಬಲಿ ನೇಮೋತ್ಸವ

ಮಡಂತ್ಯಾರು : ಮಚ್ಚಿನ ಶ್ರೀ ಮಾರಿಕಾಂಬ ದೇವಿ ಸನ್ನಿಧಿ ಮಾರಿಗುಡಿ ಪಾರೆಂಕಿ ಸಪ್ತಮದಶ ಪ್ರತಿಷ್ಠ ವರ್ಧಂತ್ಯುತ್ಸವ ವಾರ್ಷಿಕ ದೊಂಪದ ಬಲಿ ನೇಮೋತ್ಸವ ಜ. 28 ಜರಗಿತು.

ಬ್ರಹ್ಮಶ್ರೀ ಶಿವಪ್ರಸಾದ್ ತಂತ್ರಿ ಟಿವಿ ಶ್ರೀಧರರಾವ್ ಪ್ರಧಾನ ಅರ್ಚಕರು ಇವರ ಪುರೋಹಿತದೊಂದಿಗೆ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ ಕಲಶ ಪ್ರತಿಷ್ಠೆ ನವಕ ಕಳಶಾಅಭಿಷೇಕ ಮಧ್ಯಾಹ್ನ ವಿಶೇಷ ಪೂಜೆ ಅನ್ನಸಂತರ್ಪಣೆ ರಾತ್ರಿ ಮೂಡಾಯೂರು ಗುತ್ತಿನಿಂದ ಗ್ರಾಮದೈವ ಕೊಡಮನಿತ್ತಾಯ ಮತ್ತು ಇತರ ಪರಿವಾರದ ದೈವಗಳ ಬಂಡಾರ ಆಗಮಿಸಿ ನೇಮೋತ್ಸವ ನಡೆಯಲಿದೆ.

ಮಾರಿಕಾಂಬ ದೇವಿಗೆ ವಿಶೇಷ ದೀಪಲಂಕಾರ ಗದ್ದಿಗೆ ಪೂಜೆ ದರ್ಶನ. ಪ್ರಸಾದ ವಿತರಣೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ತಾಳ ಮದ್ದಲೆ ವಾಲಿಮೋಕ್ಷ ನಡೆಯಲಿದೆ. ಕೆ ರತ್ನರಾಜ ಪಡಿವಾಳ್ ಮತ್ತು ಕೆ ರಾಜರತ್ನ ಪಡಿವಾಳ್ ಆಡಳಿತ ಮೊಕ್ತೇಶರರು ಡಾ. ಕೆ. ಯಸ್ ಬಲ್ಲಾಳ್, ಕೋಶಾಧಿಕಾರಿ ಬಾಲಚಂದ್ರ ಹೆಗ್ಡೆ, ಅಧ್ಯಕ್ಷರು ವಿಠಲ್ ಶೆಟ್ಟಿ ಮುಡಯೂರು, ಗೌರವಾಧ್ಯಕ್ಷರು ಜಯಂತಿ ಹಾರಬೆ, ಕಿಶೋರ್ ಕುಮಾರ್ ಶೆಟ್ಟಿ, ಹೆಚ್ ಕಾಂತಪ್ಪ ಗೌಡ ಹಾಗೂ ಊರ ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya

ದಿಡುಪೆ: ಮರದಿಂದ ಬಿದ್ದು ವ್ಯಕ್ತಿ ಸಾವು

Suddi Udaya

ಇಂದು(ಎ.30): ಪದ್ಮುಂಜ ಪ್ರಾ.ಕೃ.ಪ.ಸ. ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ರಘುಪತಿ ಕೆ ಅನಾಬೆ ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸನ್ಮಾನ

Suddi Udaya

ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ.45 ಸಾವಿರ ಮೌಲ್ಯದ ಎಂಡಿಎಂಎ ಪತ್ತೆ – ಮೂವರ‌ ಬಂಧನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಎಂಟನೇ ದಿನದ ಬ್ರಹ್ಮಕಲಶೋತ್ಸವ:

Suddi Udaya

ಪ್ರಕೃತಿ ವಿಸ್ಮಯ: ಕಡಿದ ಬಾಳೆಗಿಡದಲ್ಲಿ ಹೂ ಬಿಟ್ಟ ಬಾಳೆ ಗೊನೆ

Suddi Udaya
error: Content is protected !!