April 21, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿ ಕೇಶವ ಪೂಜಾರಿಗೆ ಶಿಕ್ಷೆ ಪ್ರಕಟ

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಲು ಕಾರಣವಾಗಿದ್ದ ಆರೋಪಿ ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಕೇಶವ ಪೂಜಾರಿ(43)ಗೆ ಮಂಗಳೂರು ಪೋಕ್ಸೋ ನ್ಯಾಯಾಲಯ ಆರೋಪ ಸಾಭಿತಾಗಿರುವುದಕ್ಕೆ 20 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಜ.28 ರಂದು ಶಿಕ್ಷೆ ಪ್ರಕಟ ಮಾಡಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 11-11-2023 ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಜ.28 ರಂದು ಆರೋಪಿ ಕೇಶವ ಪೂಜಾರಿ ಎಂಬಾತನಿಗೆ u/s 6 pocso 376(2)(n). 376(3) ನಲ್ಲಿ 20 ವರ್ಷ ಕಾರಗೃಹ ಶಿಕ್ಷೆ 50 ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ 4 ತಿಂಗಳ ಸಾದ ಕಾರಾಗೃಹ ಶಿಕ್ಷೆ ಹಾಗೂ u/s 506 ನಲ್ಲಿ 3 ತಿಂಗಳ ಅವಧಿ ಕಾರಾಗೃಹ ಶಿಕ್ಷೆ 5 ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ 15 ದಿನ ಕಾರಾವಾಸ ವಿಧಿಸಿ ಮಂಗಳೂರು FT&SC-2 ನ್ಯಾಯಾಲಯದ ನ್ಯಾಯಾಧೀಶರಾದ ಮನು.ಕೆ.ಎಸ್ ಅವರು ತೀರ್ಪು ನೀಡಿದ್ದಾರೆ.

ಈ ಪ್ರಕರಣವನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಪಟ್ಟಿ ಸಲ್ಲಿಸಿದ್ದು.ಇವರಿಗೆ ಬೆಳ್ತಂಗಡಿ ಪೊಲೀಸರಾದ ವಿಜಯ ರೈ , ಸುನಿತಾ ,ಬೆನ್ನಿಚ್ಚನ್ , ಚರಣ್ ರಾಜ್, ಎ.ಎಸ್.ಐ ಕುಲಜ್ಯೋತಿ ತಿಲಕ್ ರಾಜ್, ಸುನಿತಾ ತನಿಖಾ ಸಹಾಯಕರಾಗಿದ್ದು. ನ್ಯಾಯಾಲಯದ ಪೂರಕ ಸಾಕ್ಷಿಗಳನ್ನು ಧರ್ಮಸ್ಥಳ ಕೋರ್ಟ್ ಪಿಸಿ ಮೆಹಬೂಬ್ ಪಾಟೀಲ್‌ ನೋಡಿಕೊಂಡಿದ್ದರು. ಸರಕಾರಿ ಅಭಿಯೋಜರಾಗಿ ಬದ್ರಿನಾಥ್ ನಾಯರಿ ಸಹಕರಿಸಿದರು.

Related posts

ಬೆಳ್ತಂಗಡಿ ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಆಯ್ಕೆ

Suddi Udaya

ಧರ್ಮಸ್ಥಳ: ನೇತ್ರಾವತಿ ಅಜಿಕುರಿ ಬಳಿ ರಸ್ತೆಗೆ ಬಿದ್ದ ಮರ

Suddi Udaya

ಪಂಚಾಯತ್‌ ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರುನಲ್ಲಿ ಗ್ರಾಮ ಪಂಚಾಯತ್ ನೌಕರರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

Suddi Udaya

ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದ ಒಂಟಿ ಸಲಗ

Suddi Udaya

ಹೊಸಂಗಡಿ ಗ್ರಾ.ಪಂ. ನ ನೇತೃತ್ವದಲ್ಲಿ ಕುರ್ಲೋಟ್ಟು ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಬಳಂಜ: ನಾಲ್ಕೂರು ನಿವಾಸಿ ಮನೋಹರ ಪೂಜಾರಿ ಸೇನೆಗೆ ಆಯ್ಕೆ

Suddi Udaya
error: Content is protected !!