September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರುಡ್‌ ಸೆಟ್‌ ಸಂಸ್ಥೆಯಲ್ಲಿ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ನಿಮ್ಮಲ್ಲಿ ಇರುವ ಧೈರ್ಯ, ಚಾಕಕ್ಯತೆ, ಕ್ರಿಯಾಶೀಲತೆ ನೋಡಿ ನೀವು ನಿಜವಾಗಿಯೂ ಯಶಸ್ಸು ಕಾಣುತ್ತೀರಿ ಎಂದು ಭಾವಿಸುತ್ತೇನೆ. ನೀವು ಒಟ್ಟಿಗೆ ಸೇರಿ ಕಲಿಯುವುದರಿಂದ ಇನ್ನೊಬ್ಬರನ್ನು ತುಳಿದು ಬದುಕು ಸಾಮರ್ಥ್ಯ ವ್ಯರ್ಥ. ಆದರೆ ಇನ್ನೊಬ್ಬರನ್ನು ಅರಿತು ಜೊತೆಯಾಗಿ ಬದುಕಿ ಬಾಳುವುದು ಸಾಮರ್ಥ್ಯ ಎಂದು ಕಾಣುತ್ತದೆ. ಬೇರೆ ಬೇರೆ ಊರುಗಳಿಂದ ಬೇರೆ ಬೇರೆ ಹಿನ್ನಲೆಯನ್ನು ಹೊಂದಿರುವ ನೀವು ರುಡ್‌ ಸೆಟ್‌ ಸಂಸ್ಥೆಗೆ ಬಂದು ಒಟ್ಟಾಗಿ ಒಂದೇ ಮನೆಯವರಾಗಿ ಕಲಿತ್ತಿದ್ದೀರಿ ತುಂಬಾ ಸಂತೋಷ. ಇದನ್ನು ಮುಂದುವರೆಸಿ. ಈ ಸಂಸ್ಥೆಯಲ್ಲಿ ವೃತ್ತಿ ಕೌಶಲ್ಯದ ಜೊತೆಗೆ ಜೀವನ ಕೌಶಲ್ಯವನ್ನು ಕಲಿಸಿ, ಇದನ್ನು ಅಳಡಿಸಿಕೊಂಡು ನಡೆಯಿರಿ. ನಮ್ಮ ಯೋಚನೆಗಳು ಚೆನ್ನಾಗಿ ಇದ್ದಲ್ಲಿ ಯೋಜನೆ ಚೆನ್ನಾಗಿ ಆಗುತ್ತದೆ. ಸಮಸ್ಯೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಅದನ್ನು ಎದುರಿಸಿ ನಾವು ಬದುಕುವುದನ್ನು ಕಲಿಯಬೇಕು.ವೃತ್ತಿ ಜೀವನದ ಜೊತೆಗೆ ಸಂಸಾರಕ್ಕೂ ಒಂದಷ್ಟು ಸಮಯ ಕೊಡಬೇಕು ಎಂದು ನೆನಪಿರಲಿ. ವಸ್ತ್ರ ವಿನ್ಯಾಸಕ್ಕೆ ಯಾವತ್ತೂ ಬೇಡಿಕೆ ಇಲ್ಲಂತ ಆಗುವುದಿಲ್ಲ. ಪ್ರತಿಯೋಬ್ಬರು ಹೊಸ ವಿನ್ಯಾಸಗಳನ್ನು ಕೇಳುತ್ತಾರೆ. ನೀವು ಎಷ್ಟು ಹೊಸತನ ಕಲಿಯುತ್ತೀರಿ ಅಷ್ಟು ಕೆಲಸ ನಿಮಗೆ ಸಿಗುತ್ತದೆ. ನೀವು ಕಂಡ ಕನಸ ಅನ್ನು ನನಸು ಮಾಡಿಕೊಳ್ಳಿ ಶುಭವಾಗಲಿ ಎಂದು ಧರ್ಮಸ್ಥಳದ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪರಿಮಳ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು. ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 33 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಶ್ರೀಮತಿ ದೀಪ್ತಿ, ಕುಮಾರಿ ಪೂರ್ಣಿಮಾ ಮತ್ತು ಕುಮಾರಿ ಸ್ವಾತಿ, ಕುಮಾರಿ ಲಾವಣ್ಯ ಪ್ರಾರ್ಥನೆ ಮಾಡಿದರು. ಶ್ರೀಮತಿ ಮೋನಿಕಾ, ಕುಮಾರಿ ಪೂಣ್ಯಶ್ರೀ , ಶ್ರೀಮತಿ ಯಾಮಿನಿ ತರಬೇತಿಯ ಅನುಭವ ಹಂಚಿಕೊಂಡರು.

Related posts

ಸುಂದರ ಮಲೆಕುಡಿಯರ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ

Suddi Udaya

ಕಾಶಿಪಟ್ಣ: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ

Suddi Udaya

ಮುಂಡೂರು: ಶಿವಪ್ರಸಾದ್ ನಾನಿಲ್ತ್ಯಾರು ನಿವಾಸಿ ಆನಂದ ಸಾಲಿಯಾನ್ ನಿಧನ

Suddi Udaya

ಉಜಿರೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಹಲವು ಸ್ಪರ್ಧೆಗಳಲ್ಲಿ ಎಸ್.ಡಿ.ಎಮ್ ಅನುದಾನಿತ ಸೆಕೆಂಡರಿ ಶಾಲೆಗೆ ಪ್ರಶಸ್ತಿ

Suddi Udaya

ನಡ ಮೂಡಾಯಿಬೆಟ್ಟು ಹಂದಿ ಸಾಕಾಣಾ ಕೇಂದ್ರದಿಂದ ಹಂದಿಯನ್ನು ಎಳೆದೊಯ್ದ ಚಿರತೆ

Suddi Udaya

ಕಕ್ಕಿಂಜೆ ಮಾಂಡೋವಿ ಮೋಟಾರ್ಸ್‌ನಲ್ಲಿ ನ್ಯೂ ಬ್ರೆಝಾ ಕಾರು ಬಿಡುಗಡೆ

Suddi Udaya
error: Content is protected !!