April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಪಂಚದುರ್ಗ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಕೊಯ್ಯೂರು : ಕೊಯ್ಯೂರು ಪಂಚದುರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ 2023 – 24 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಗ್ರಾಮ ಪಂಚಾಯತ್ ಆವರಣದಲ್ಲಿ ಜ.30 ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷೆ ದಯಾಮಣಿ‌, ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಪಿ , ಪಂಚಾಯತ್ ಅಭಿವೃದ್ಧಿ ‌ಅಧಿಕಾರಿ ಪ್ರಕಾಶ್ ಎಸ್ , ಪಂಚಾಯತ್ ಉಪಾಧ್ಯಕ್ಷ ಹರೀಶ್ ರವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಎಮ್ ಬಿಕೆ ಶುಭಲಕ್ಷ್ಮಿ ವಾರ್ಷಿಕ ವರದಿ ಹಾಗೂ ಜಮಾ ಖರ್ಚಿನ ವರದಿಯನ್ನು ಮಂಡಿಸಿ, ಅನುಮೋದನೆಯನ್ನು ಪಡೆಯಲಾಯಿತು. ವಲಯ ಮೇಲ್ವಿಚಾರಕ ಜಯಾನಂದ್ ವಾರ್ಷಿಕ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿಯನ್ನು ನೀಡಿದರು. ಒಕ್ಕೂಟದ ಬೆಳಕು‌ ಸಂಜೀವಿನಿ‌ ಸಂಘದ ಸದಸ್ಯೆ ಶ್ರೀಮತಿ ಪುಷ್ಪಾವತಿ ಇವರ ಕಲ್ಪಾಮ್ರತ ಕೊಬ್ಬರಿ‌ ಎಣ್ಣೆಯನ್ನು ಲಾಂಚ್‌‌ ಮಾಡಲಾಯಿತು. ಒಕ್ಕೂಟದಿಂದ ಸಿಐಫ್ ಪಡೆದು ಉತ್ತಮ ಜೀವನನೋಪಾಯ ಚಟುವಟಿಕೆಯನ್ನು ನಡೆಸುವ ಸಂಘದ ಸದಸ್ಯೆ ವಿಜಯ ಹಾಗೂ ಉತ್ತಮ 2 ಸಂಘಗಳನ್ನು‌ ಗುರುತಿಸಿ ಒಕ್ಕೂಟದ ವತಿಯಿಂದ ಸ್ಮರಣಿಕೆ ನೀಡಲಾಯಿತು .

ಈ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಳಿಕ‌ ಪದಗ್ರಹಣವನ್ನು ನಡೆಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಯಾನಂದ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬೀಳ್ಕೊಟ್ಟ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ, ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ತರಕಾರಿಗಳು, ಅಕ್ಕಿರೊಟ್ಟಿ, ಚಕ್ಕುಲಿ, ಉಪ್ಪಿನಕಾಯಿ, ಕೊಬ್ಬರಿ‌ ಎಣ್ಣೆಯನ್ನು ಮಾರಾಟ ಮಾಡಲಾಯಿತು. ಶ್ರೀಮತಿ ಶ್ರುತಿ‌ ಸ್ವಾಗತಿಸಿ , ಧನಲಕ್ಷ್ಮಿ ಸಂಘದ ಸದಸ್ಯೆ ಗೀತಾ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆಗೆ ಹೋಗಿ ಬರುತ್ತೇನೆ ಎಂದ ನಿಡ್ಲೆಯ ವ್ಯಕ್ತಿ ನಾಪತ್ತೆ

Suddi Udaya

ಸುಬ್ರಹ್ಮಣ್ಯದಲ್ಲಿ ಡೆಂಗು ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತಾ ಕಾರ್ಯ

Suddi Udaya

ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇದರ ಆಶ್ರಯದಲ್ಲಿ : ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟನೆ

Suddi Udaya

ಬೆಳ್ತಂಗಡಿ: ಕ್ರಿಸ್ಮಸ್ ಹಬ್ಬಕ್ಕೆ ಲೈಟಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ 9 ನೇ ತರಗತಿ ವಿದ್ಯಾರ್ಥಿ ಸಾವು

Suddi Udaya

ಮಾಚಾರಿನಲ್ಲಿ 31 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉದ್ಘಾಟನೆ

Suddi Udaya

ಎ.12: ಅಳದಂಗಡಿ ಹನುಮೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರಿಗೆ “ಮಹಾಭಿವಂದ್ಯ” ಗೌರವಾಭಿನಂದನೆ

Suddi Udaya
error: Content is protected !!