ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಯಾಣಿಕರ ಬಸ್ಸು ತಂಗುದಾಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ತಾಲೂಕು ನರೇಗಾ ಐಇಸಿ ಸಂಯೋಜಕರು ಶ್ರೀಮತಿ ವಿನಿಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ,ಗ್ರಾ.ಪಂ ಸಿಬ್ಬಂದಿಗಳಾದ ಸುಂದರ ಕೆ., ಮನೋಜ್ ಬಿ, ಆಶಿತಾ ಎ. ಎನ್, ಮೋಹಿನಿ, ಲೋಕೇಶ್ ಕೆ, ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಎಮ್. ಬಿ. ಕೆ ಉಪಸ್ಥಿತರಿದ್ದರು.