ಬೆಳ್ತಂಗಡಿ: ಅಭ್ಯಾಸ್ ಅಕಾಡೆಮಿ ಮತ್ತು ಪೈ ಅಕಾಡೆಮಿ ಬೆಳ್ತಂಗಡಿ ತಾಲೂಕು ಇದರ ಸಹಭಾಗಿತ್ವದಲ್ಲಿ ಅಭ್ಯಾಸ ಅಕಾಡೆಮಿಯಲ್ಲಿ ಬೆಳ್ತಂಗಡಿ ತಾಲೂಕಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ ಕಾರ್ಯಾಗಾರವು ಫೆ. 2 ರಂದು ನಡೆಯಿತು.
ಕಾರ್ಯಾಗಾರವನ್ನು ಸುದ್ದಿ ಉದಯ ಪತ್ರಿಕೆಯ ಉಪ ಸಂಪಾದಕರಾದ ಸಂತೋಷ್ ಪಿ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಮುಂದಿನ ಓದಿನ ಕುರಿತು ಜಾಗ್ರತರಾಗಿರಬೇಕು. ಬದ್ದತೆ ಮತ್ತು ಇಚ್ಛಾಶಕ್ತಿಯಿದ್ದಾಗ ಸಾಧನೆ ಮಾಡಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೊಬೋ ವಹಿಸಿ ಮಾತನಾಡಿ ಒಬ್ಬ ಮಾದರಿ ವ್ಯಕ್ತಿಯಾಗಿ ಬೆಳೆಯಲೂ ಒಳ್ಳೆ ಗುರಿ, ವಿದ್ಯೆ ಹಾಗೂ ಬುದ್ದಿ ಅಗತ್ಯ. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಭವಿಷ್ಯವನ್ನು ಕಟ್ಟಬೇಕು.ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಫಲಪ್ರದವಾಗುತ್ತದೆ ಎಂದರು.
ವೇದಿಕೆಯಲ್ಲಿ ಪೈ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಚೈತ್ರ, ಎಸ್.ಡಿ.ಎಮ್.ಸ್ನಾತಕೋತ್ತರ ಕಾಲೇಜಿನ ನಿವೃತ್ತ ಡೀನ್ ಗಣಪಯ್ಯ ಭಟ್,ಅಭ್ಯಾಸ್ ಸಂಸ್ಥೆಯ ಆಡಳಿತಧಿಕಾರಿ ಪ್ರಮೋದ್ ಗೌಡ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ ವಾರ್ಡನ್ ಶ್ರೀಮತಿ ಹೇಮಲತಾ ಎಂ.ಉಪಸ್ಥಿತರಿದ್ದರು.
ಅಬ್ಯಾಸ್ ಅಕಾಡೆಮಿಯ ಅಧ್ಯಕ್ಷರಾದ ಕಾರ್ತಿಕೇಯ ಭಟ್ ಸಂಸ್ಥೆಯ ಬಗ್ಗೆ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
120 ವಿದ್ಯಾರ್ಥಿಗಳು ಭಾಗವಹಿಸುವಿಕೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಾಗಾರದಲ್ಲಿ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿ ತರಭೇತಿಯ ಸದುಪಯೋಗವನ್ನು ಪಡೆದರು.ಪರಿಣಿತ ತರಬೇತುದಾರರಾದ ಶ್ರೀಮತಿ ಚೈತ್ರ, ಶ್ರೀಮತಿ ಸುಮಲತ ಹಾಗೂ ಕಾರ್ತಿಕೇಯ ಭಟ್ ತರಬೇತಿ ನೀಡಿದರು.