ಸಾವ್ಯ : ಇಲ್ಲಿಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವನ್ನು ಕೇರಳ ಮೂಲದ ವ್ಯಕ್ತಿಯು ಮಾಂಸಕ್ಕಾಗಿ ಅಥವಾ ಇನ್ನಾವುದೋ ಉದ್ದೇಶದಿಂದ ಹತ್ಯೆ ಮಾಡಿ ದನದ ಅವಶೇಷಗಳು ಹೂತು ಹಾಕಿದ ಬಗ್ಗೆ ಫೆ.4 ರಂದು ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ವಿವರ: ಫೆ.05 ರಂದು ಸಾವ್ಯ ಗ್ರಾಮದ ನೂಜಿಲೋಡಿ ಎಂಬಲ್ಲಿ ಆಗ್ನೇಶ್ ಎಂಬವರ ದೂರಿನಂತೆ ನೆರೆ-ಮನೆಯ ವಿಜಯ ಹೆಗ್ಡೆ ಎಂಬವರ ಮನೆಯ ಅಂಗಳದಲ್ಲಿ ನಾಯಿಯೊಂದು ನದಿಬದಿಯಿಂದ ದನದಂತೆ ಕಾಣುವ ಯಾವುದೋ ಪ್ರಾಣಿಯ ಕಾಲನ್ನು ಬಾಯಿಯಲ್ಲಿ ಕಚ್ಚಿ ಎಳೆದುಕೊಂಡು ಬರುತ್ತಿದ್ದುದನ್ನು ಆಗ್ನೇಶ್ ತಂದೆ ಅಮ್ಮಿ ಪೂಜಾರಿ ಎಂಬವರು ನೋಡಿ ವಿಜಯ ಹೆಗ್ಡೆಯರಿಗೆ ಮಾಹಿತಿ ತಿಳಿಸಿ ಬಳಿಕ ವಿಜಯ ಹೆಗ್ಡೆಯವರೊಂದಿಗೆ ನದಿ ಬದಿಗೆ ತೆರಳಿ ನೋಡಲಾಗಿ ಪ್ರಾಣಿಯ ಅವಶೇಷಗಳನ್ನು ಮಣ್ಣಿನಲ್ಲಿ ಹೂತು ಹಾಕಿದ್ದುದನ್ನು ಯಾವುದೋ ಪ್ರಾಣಿಗಳು ಕೆಡವಿರುವಂತೆ ಕಂಡುಬರುತ್ತಿದ್ದು, ನೂಜಿಲೋಡಿ ಮನೆಯಲ್ಲಿ ವಾಸವಿದ್ದ ಕೇರಳ ಮೂಲದ ವ್ಯಕ್ತಿಯ ಬಾಬ್ತು ಗಂಡು ಕರುವು ಈ ದಿನ ತೋಟದಲ್ಲಿ ಕಾಣಿಸದೇ ಇರುವುದರಿಂದ ಸದ್ರಿ ಜಾನುವಾರನ್ನು ಫೆ.04 ರಂದು ಕೇರಳ ಮೂಲದ ವ್ಯಕ್ತಿಯು ಮಾಂಸಕ್ಕಾಗಿ ಅಥವಾ ಇನ್ನಾವುದೋ ಉದ್ದೇಶದಿಂದ ಹತ್ಯೆ ಮಾಡಿ ಅವಶೇಷಗಳನ್ನು ನದಿ ಬದಿಯಲ್ಲಿ ಮಣ್ಣಿನಲ್ಲಿ ಹೂತುಹಾಕಿರುವ ಬಗ್ಗೆ ಶಂಕಿಸಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.