September 6, 2026
ಅಪರಾಧ ಸುದ್ದಿ

ಬೈಕ್ ಡಿಕ್ಕಿ ಗಾಯಾಳು ಕಡಿರುದ್ಯಾವರಅಂತರ ಲೋಕಯ್ಯ ಗೌಡ ಮೃತ್ಯು

ಬೆಳ್ತಂಗಡಿ:ಮುಂಡಾಜೆ-ದಿಡುಪೆ ರಸ್ತೆಯ
ಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಶುಕ್ರವಾರ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.
ಪಾದಚಾರಿ ಕಡಿರುದ್ಯಾವರದ
ಅಂತರ ಲೋಕಯ್ಯ ಗೌಡ(65) ಎಂಬವರಿಗೆ
ದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು,ಗಂಭೀರವಾಗಿ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರಿಗೆ ಪತ್ನಿ,ಪುತ್ರಿ ಹಾಗೂ ಪುತ್ರ ಇದ್ದಾರೆ. ಘಟನೆ ಬಗ್ಗೆ ಬೈಕ್ ಸವಾರ ಚರಣ್ ರಾಜ್ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ನೆರಿಯದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ದಾಳಿ : ಹಿಟಾಚಿ, ಟಿಪ್ಪರ್, ಟಾಕ್ಟರ್ ವಶಕ್ಕೆ

Suddi Udaya

ನಿಡ್ಲೆ ಆನಂದ ವೇಲ್ನೇಸ್ ರೆಸಾಟ್೯ನ ಮಹಡಿಯಿಂದ ಬಿದ್ದು ನಿಡ್ಲೆಯ ಯುವಕ ಮನೀಶ್ ಮೃತ್ಯು

Suddi Udaya

ಕಾರಿನಲ್ಲಿ ಮಲಗಿದ್ದವರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದ ಘಟನೆ: ಗಾಯಗೊಂಡ ಮಿತ್ತಬಾಗಿಲು ಸಂಶುದ್ದೀನ್ ಮಂಗಳೂರು ಆಸ್ಪತ್ರೆಯಲ್ಲಿ ದಾಖಲು

Suddi Udaya

ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ: ಬೈಕ್ ಸಹಿತ ರೂ. 76 ಸಾವಿರ ಮೌಲ್ಯದ ಮದ್ಯ ವಶ

Suddi Udaya

ಗ್ರಾಮಕರಣಿಕ ಮಹೇಶ್ ಗೆ ಜೈಲು ಶಿಕ್ಷೆ

Suddi Udaya

ಪುದುವೆಟ್ಟಿನ ಮಹಿಳೆ ಪುಣ್ಯಶ್ರೀ ಪುತ್ತೂರು ತಾಯಿ ಮನೆಯಲ್ಲಿ ಬಾವಿಗೆ ಬಿದ್ದು ಮೃತ್ಯು

Suddi Udaya
error: Content is protected !!