ಸುಲ್ಕೇರಿ: ಪಿಎಂ ಜನ್ ಮನ್ ಯೋಜನೆಯಡಿ ರೂ.6.8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ
ಅಟ್ರಿಂಜೆ- ಸುಲ್ಕೇರಿ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ದ.ಕ ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಫೆ.8ರಂದು ಶಿಲಾನ್ಯಾಸವನ್ನು ನೇರವೇರಿಸಿದರು.
ಬಳಿಕ ಮಾತನಾಡಿದ ಅವರು ಕೊರಗ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಪ್ರಧಾನಿ ನರೇಂದ್ರ ಮೋದಿಜೀಯವರು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಎಲ್ಲಾ ಸ್ತರಗಳಲ್ಲಿ ಕೊರಗ ಸಮಾಜದ ಬಂಧುಗಳನ್ನು ಗಟ್ಟಿಗೊಳಿಸಿ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಜೋಡಿಸುವ ದೃಷ್ಟಿಯಿಂದ ಪಿಎಂ ಜನ್ ಮನ್ ಯೋಜನೆ ಜಾರಿಯಲ್ಲಿದೆ ಎಂದರು.
ಕೊರಗ ಸಮಾಜದ ಬಂಧುಗಳಿಗೋಸ್ಕರ ದ.ಕ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ರೂ.60 ಲಕ್ಷ ವೆಚ್ಚದಲ್ಲಿ ಮಾಹಿತಿ ಸೆಂಟರ್ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್,ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ,ಸುಲ್ಕೇರಿ ಪಂಚಾಯತ್ ಅಧ್ಯಕ್ಷೆ ಗಿರಿಜಾ,ಉಪಾಧ್ಯಕ್ಷ ಶುಭಕರ ಬಂಗೇರ,ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ,ಯಶೋಧ ಎಲ್ ಬಂಗೇರ,ಬಿಜೆಪಿ ಮುಖಂಡ ಸದಾನಂದ ಪೂಜಾರಿ ಉಂಗಿಲಬೈಲು,ಉದ್ಯಮಿ ಸುಂದರ ಶೆಟ್ಟಿ, ಬ್ಯಾಂಕ್ ಉದ್ಯೋಗಿ ಸುಧೀರ್ ಸೂರ್ಯನಾರಾಯಣ ಕೃಪಾ,ಶಿರ್ಲಾಲು ಹಾ.ಉ ಸಂಘದ ಅಧ್ಯಕ್ಷ ಮಾಧವ ಶಿರ್ಲಾಲು,ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ,ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಗೌಡ,ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಶೆಟ್ಟಿ, ಸುಲ್ಕೇರಿ ಗ್ರಾ.ಪಂ ಸದಸ್ಯರಾದ ಪೂರ್ಣಿಮಾ,ಪ್ರೇಮಾ,ಪ್ರಮುಖರಾದ ಹೆಚ್.ಎಲ್ ರಾವ್,ರಾಜು ಪೂಜಾರಿ,ಮೋಹನ್ ಅಂಡಿಂಜೆ,ಸುಪ್ರೀತ್ ಜೈನ್,ಯೋಗೀಶ್ ಪೂಜಾರಿ ಬೊಳುವಾಲ್,ಇಂಜಿನಿಯರ್ ರಾಜಾರಾಮ್,ಗುತ್ತಿಗೆದಾರ ನವೀನ್ ಹೆಗ್ಡೆ ಕಾರ್ಕಳ,ಪಾರ್ಶ್ವನಾಥ ಜೈನ್,ವಸಂತ ಪೂಜಾರಿ, ಗಣೇಶ್ ಹೆಗ್ಡೆ ನಾರಾವಿ,ಜಗದೀಶ್ ಹೆಗ್ಡೆ ಕೊಕ್ರಾಡಿ, ವಿಜಯ ಗೌಡ ವೇಣೂರು,ಅರುಣ್ ಕುಲಾಲ್ ಮುಡಿಪಿರೆ,ಸಂಜೀವ ಶೆಟ್ಟಿ ಸುಲ್ಕೇರಿ,ಬಾಲಕೃಷ್ಣ ಮನ್ನಡ್ಕ,ಕೆ.ಸತ್ಯನಾರಾಯಣ ನೆಕ್ಕಿನಡ್ಕ,ನಾರಾಯಣ ಕೊರಗ ಅಂಟ್ರಿಂಜೆ,ವಿಶ್ವನಾಥ ಶೆಟ್ಟಿ, ವಾಸು ಭಟ್,ರಮಾನಾಥ ಪೂಜಾರಿ,ರಾಜು ಪೂಜಾರಿ ಪೆರಾಡಲು ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಸುಲ್ಕೇರಿ ಶ್ರೀರಾಮ ಶಾಲೆ ಹಾಗೂ ಮಹಮ್ಮಾಯಿ ಕ್ಷೇತ್ರಕ್ಕೆ ಸಂಸದರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸದರನ್ನು ಕ್ಷೇತ್ರದ ಹಾಗೂ ಶಾಲೆಯ ವತಿಯಿಂದ ಗೌರವಿಸಿದರು.