ಉಜಿರೆ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.
ಫೆ. 12 ರಂದು ಉಜಿರೆಯಿಂದ ಹೊರಟ ಸಿಬ್ಬಂದಿಗಳು ಫೆ. 13 ಗೆ ಅಯೋಧ್ಯೆ ತಲುಪಿದ್ದಾರೆ. ಫೆ. 14 ರಂದು ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತೀರ್ಥ ಸ್ನಾನ ಮಾಡಿ ಸಂಭ್ರಮಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಬ್ಬಂದಿಗಳು ಪ್ರಯಾಗ್ ರಾಜ್ ನಲ್ಲಿ ಹೇಳುವಷ್ಟು ಜನಸಮೂಹ ಇಲ್ಲ, ಬರುವಂತಹ ಭಕ್ತಾದಿಗಳಿಗೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.
ಕುಂಭಮೇಳದಲ್ಲಿ ತೀರ್ಥ ಸ್ನಾನ ಮಾಡುವ ಒಂದು ಅನುಭವವವೇ ಬೇರೆ. ಇದರಿಂದ ನಮಗೆ ಮಾನಸಿಕ ನೆಮ್ಮದಿ ದೊರಕಿದೆ ಎಂದು ಹೇಳಿದ್ದಾರೆ.