
ಬೆಳ್ತಂಗಡಿ: ಪ್ರತಿಯೊಬ್ಬ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಉತ್ತಮ ಗುರಿಯನ್ನು ಇಟ್ಟುಕೊಳ್ೞಬೇಕು.ಹಿಂದೆ ಬಹುತೇಕ ಮಕ್ಕಳಿಗೆ ಮಾರ್ಗದರ್ಶಕರು ಇರಲಿಲ್ಲ. ಇಂದು ಗುರುವಾಯನಕೆರೆ ಎಕ್ಸೆಲ್ ಕಾಲೇಜು ಮಕ್ಕಳ ಶಿಕ್ಷಣ ಮುಂದಿನ ಬಗ್ಗೆ ದಾರಿತೋರಿಸುವ ಉತ್ತಮ ಕೆಲಸ ಮಾಡುತ್ತಿದೆ ಇದನ್ನು ಸದುಪಯೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ಶಿಕ್ಷಕ ಖ್ಯಾತ ವಾಗ್ಮಿ ಅಜಿತ್ ಕುಮಾರ್ ಕೊಕ್ರಾಡಿ ಹೇಳಿದರು.

ಅವರು ಫೆ.16 ರಂದು ಎಕ್ಸೆಲ್ ಕಾಲೇಜು ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ ಎಸ್ ಎಸ್ ಎಲ್ ಸಿ ನಂತರ ಮುಂದೇನು ಎಂಬ ಹತ್ತನೆ ತರಗತಿ ಮಕ್ಕಳಿಗೆ ಮತ್ತು ಪೋಷಕರಿಗೆ ನಡೆದ ವಿಷೇಷ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಧರಣೇಂದ್ರ ಜೈನ್ ಮಾತನಾಡಿ ಮಕ್ಕಳಿಗೆ ಯಾವ ಆಯ್ಕೆಯನ್ನು ಮಾಡಿಕೊಳ್ಳುವ ಅವಕಾಶ ಇಂದು ಇದೆ.ಆದರೆ ಮಕ್ಕಳಲ್ಲಿ ಕಲಿಯುವ ಆಸಕ್ತಿ ಬೇಕು. ಹಿರಿಯರು ನಮಗೇನು ಮಾಡಿದ್ದಾರೆ ಎನ್ನುವುದಕ್ಕಿಂತ ನಾನೇನು ಹಿರಿಯರಿಗೆ ನೀಡಬಲ್ಲೆನು ಎನ್ನುವ ಸಂಕಲ್ಪ ಮಾಡಬೇಕು ಎಂದರು.

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅದ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಇಂಜಿನಿಯರ್, ಡಾಕ್ಟರ್ ಅಗಬೇಕು ಎನ್ನುವ ಕನಸು ಕಾಣುವುದು ತಪ್ಪಲ್ಲ ಆದರೆ ಎಕ್ಸೆಲ್ ಕಾಲೇಜು ಅವರನ್ನು ಉತ್ತಮ ಇಂಜಿನಿಯರ್, ಉತ್ತಮ ಡಾಕ್ಟರ್ ಮಾಡುವ ಕಸಸು ಕಾಣುತ್ತದೆ ಮತ್ತು ಮಾಡಿಸಿಯೇ ಮಾಡುತ್ತದೆ. ನುರಿತ ಉಪನ್ಯಾಸಕರ ತಂಡ ಕಾಲೇಜಿನಲ್ಲಿ ಇದ್ದು ಉತ್ತಮ ಹಾಸ್ಟೆಲ್ ವ್ಯವಸ್ಥೆ ಇದೆ. ಸಿಇಟಿ,ನೀಟ್, ಜೆಯುಯು ಇನ್ನಿತರ ಬೇರೆ ಬೇರೇ ಪರೀಕ್ಷ ತಯಾರಿ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಮುಂದೆ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಒಂದು ತಿಂಗಳ ಕಾಲ ಮಾಹಿತಿ ಕಾರ್ಯಾಗಾರ ಕಾಲೇಜಿನಲ್ಲಿ ಹಮ್ಮಿಕೊಳ್ಕಲಾಗುತ್ತಿದೆ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದೇ ಎಕ್ಸೆಲ್ ಕಾಲೇಜಿನ ಕನಸು ಎಂದರು.
ಪತ್ರಕರ್ತರಾದ ಮನೋಹರ್ ಬಳಂಜ, ಸಂತೊಷ್ ಪಿ ಕೋಟ್ಯಾನ್ ಬಳಂಜ ಶುಭಹಾರೈಸಿದರು.
ಎಕ್ಸೆಲ್ ವಿದ್ಯಾಸಾಗರ ಕ್ಯಾಂಪಸ್ ನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಎಕ್ಸೆಲ್ ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ ವಂದಿಸಿದರು. ಉಪನ್ಯಾಸಕ ಮಹಮ್ಮದ್ ಮುನೀರ್ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 350 ಕ್ಕೂ ಹೆಚ್ಚು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.