ಮುಂಡಾಜೆ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಯುವ ವಾಹಿನಿ ಸಂಚಲನ ಸಮಿತಿ, ಮುಂಡಾಜೆ ಇದರ ಆತಿಥ್ಯದಲ್ಲಿ ಪರೀಕ್ಷೆಯ ಪೂರ್ವ ತಯಾರಿಕೆಯ ಬಗ್ಗೆ ಕಾರ್ಯಾಗಾರ “ದೀವಿಗೆ ” ಎಂಬ ಶೀರ್ಷಿಕೆಯ ಅಡಿಯಲ್ಲಿ ಫೆ.23 ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವ ಮುಂಡಾಜೆ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಡಾಜೆ ಗ್ರಾ.ಪಂ. ಅಧ್ಯಕ್ಷ ಹಾಗೂ ಯುವ ವಾಹಿನಿ ಸಂಚಲನ ಸಮಿತಿ ಮುಂಡಾಚೆ ಇದರ ಸಂಚಾಲಕ ಗಣೇಶ್ ಬಂಗೇರ ನೆರವೇರಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಆಗಮಿಸಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಸ್ಮಿತೇಶ್ ಬಾರ್ಯರವರು ಆಗಮಿಸಿದ್ದರು. ಇವರು ಪರೀಕ್ಷಾ ನಿರ್ವಹಣೆಯಲ್ಲಿ ಪೋಷಕರ ಪಾತ್ರ ಹಾಗೂ ಮಕ್ಕಳಿಗೆ ಪರೀಕ್ಷಾ ತಯಾರಿಯ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು.

ವೇದಿಕೆಯಲ್ಲಿ ಯುವ ವಾಹಿನಿ ಸಂಚಲನ ಸಮಿತಿ ಮುಂಡಾಜೆ ಇದರ ಗೌರವ ಅಧ್ಯಕ್ಷರಾಗಿರುವ ಬಾಬು ಪೂಜಾರಿ ಕೂಳೂರು ಉಪಸ್ಥಿತರಿದ್ದರು. ಕೇಶವ ಮುಂಡಾಜೆ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ನಿಶ್ಮಿತಾರವರು ಕಾರ್ಯಕ್ರಮಕ್ಕೆ ಬಂದಿರುವಂತಹ ಅತಿಥಿಗಳನ್ನು ಸ್ವಾಗತಿಸಿದರು. ವಿತೇಶ್ ಕೋಟ್ಯಾನ್ ಧನ್ಯವಾದವಿತ್ತರು. ಜಿತೀಕ್ಷಾರವರು ಕಾರ್ಯಕ್ರಮವನ್ನು ನಿರೂಪಿಸಿದರು.