23.3 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಸೌತಡ್ಕ ದೇವಸ್ಥಾನ: ಗಂಟೆ ಹಗರಣ ಮತ್ತು ಹುಂಡಿ ಹಗರಣದ ಮರು ತನಿಖೆ ನಡೆಸಿ ವರದಿ ನೀಡಲು ಸೂಚನೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಹರಕೆ ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರ ಬಗ್ಗೆ ಮರು ತನಿಖೆ ಮಾಡುವಂತೆ ಪ್ರಶಾಂತ್ ಪೂವಾಜೆಯವರು ಧಾರ್ಮಿಕ ದತ್ತಿ ಆಯುಕ್ತರು ಬೆಂಗಳೂರು ಇವರಿಗೆ ಸಲ್ಲಿಸಿರುವ ಮನವಿಯನ್ನು ಉಲ್ಲೇಖಿಸಿ, ಈ ಬಗ್ಗೆ ತನಿಖೆ ನಡೆಸಿ, ವಿವರವಾದ ವರದಿ ಸಲ್ಲಿಸುವಂತೆ ದ.ಕ ಜಿಲ್ಲಾಧಿಕಾರಿಗಳು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.


ಪ್ರಶಾಂತ್ ಪೂವಾಜೆಯವರು ತಮ್ಮ ಮನವಿಯಲ್ಲಿ ಸದ್ರಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಹೆಚ್ಚು ಆದಾಯ ಬರುವ ದೇವಾಲಯವಾಗಿದ್ದು, ರಾಜ್ಯದಲ್ಲಿ ೧೨ನೇ ಸ್ಥಾನದಲ್ಲಿದ್ದು, ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಬಯಲು ಆಲಯ ಗಣಪತಿ ಗಂಟೆ ಗಣಪತಿ ಎಂದೇ ಪ್ರಸಿದ್ದಿ ಪಡೆದ ಈ ದೇಗುಲದಲ್ಲಿ ಸರಿ ಸುಮಾರು ಐದು ವರ್ಷಗಳ ಹಿಂದೆ 2019-2020 ನೇ ಸಾಲಿನಲ್ಲಿ ಹಗರಣವಾಗಿ ತನಿಖೆಯಾದ ಹರಕೆ ಗಂಟೆಗಳನ್ನು ಮಾಡುವುದರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖಾ ವರದಿಯೊಂದಿಗೆ ಇರುವ ಅನುಬಂಧ ಪ್ರತಿಯಲ್ಲಿ ಹಗರಣದ ಸಂದರ್ಭದಲ್ಲಿ ಇದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಹಸ್ತಕ್ಷೇಪ ಇರುವುದು ಮೇಲ್ನೋಟಕ್ಕೆ ತನಿಖಾ ವರದಿಯಲ್ಲಿ ಕಂಡುಬರುತ್ತಿದೆ ಹಾಗೂ ಇನ್ನೋರ್ವ ಸಮಿತಿ ಸದಸ್ಯರಾಗಿದ್ದ ಕೆ. ವಿಶ್ವನಾಥ ಕೊಲ್ಲಾಜೆ ಇದರ ಹೇಳಿಕೆಯಂತೆ ಸುಮಾರು ೨೦ ವರ್ಷಗಳ ಹಿಂದೆ (೨೦೦೪ ರಲ್ಲಿ) ದೇವಸ್ಥಾನದ ಹುಂಡಿಯಿಂದ ಹಣ ಪಡೆದು ಸ್ವಂತ ಆಸ್ತಿಯ ಸಾಲ ಮರುಪಾವತಿ ಮಾಡಿರುವುದಾಗಿ ನೀಡಿದ ಪತ್ರಿಕಾ ಹೇಳಿಕೆ ಸಂಶಯವನ್ನು ಉಂಟು ಮಾಡಿದೆ ಎಂದೂ, ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರ ದೇಗುಲದ ಭಕ್ತರ ನಂಬಿಕೆಗೆ ಘಾಸಿ ಹಾಗೂ ಅನುಮಾನ ಉಂಟುಮಾಡುವಂತಿದೆ ಎಂದೂ, ಪ್ರಸಕ್ತ ಸಾಲಿನ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಸಲ್ಲಿಸಿದವರಲ್ಲಿ ಸುಬ್ರಹ್ಮಣ್ಯ ಶಬರಾಯ, ಕೆ. ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ ಪಿ. ಪ್ರಶಾಂತ ರೈ ಮತ್ತು ಶ್ರೀಮತಿ ಸಿನಿ ಇವರು ಈಗಾಗಲೇ ಗಂಟೆ ಹಗರಣದ ಸಮಯದಲ್ಲಿ ಸಮಿತಿಯ ಸದಸ್ಯರಾಗಿದ್ದು ದತ್ತಿ ಕಾಯ್ದೆ ನಿಯಮ ಉಲ್ಲಂಘನೆಯನ್ನು ಮಾಡಿರುವ ಅನೇಕ ನಿರ್ಣಯಗಳು ಮಾಡಿರುವ ಇವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಬಾರದೆಂದೂ, ಗಂಟೆ ಅವ್ಯವಹಾರ ಹಾಗೂ ಭಕ್ತರ ಹುಂಡಿ ಹಣದ ಅವ್ಯವಹಾರ ಬಗ್ಗೆ ಮರು ತನಿಖೆ ಮಾಡಿಸಿ ದೇಗುಲಕ್ಕೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಕೋರಿದ್ದರು. ಸದ್ರಿ ಮನವಿಯ ಬಗ್ಗೆ ಸೂಕ್ತ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.

Related posts

ಮಂಜ್ಜೊಟ್ಟಿ ಹೋಲಿ ಕ್ರಾಸ್ ಚರ್ಚ್ ನಲ್ಲಿ “ಲಾವ್ದಾತೊ ಸಿ ಭಾನುವಾರ -2025”- ಪರಿಸರ ದಿನಾಚರಣೆ

Suddi Udaya

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಹಾಗೂ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕೃತ ರವಿಚಂದ್ರ ಸಾಲಿಯಾನ್ ರವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ ಕಾರ್ಯಕ್ರಮ

Suddi Udaya

ಕುವೆಟ್ಟು ಗ್ರಾ.ಪಂ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣ ಶಿಬಿರ ಉದ್ಘಾಟನೆ

Suddi Udaya

ಬೆಳ್ತಂಗಡಿ: ದ.ಕ.ಜಿ.ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಮುಂಡಾಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನದ ಬೀದಿ ನಾಟಕ

Suddi Udaya
error: Content is protected !!